
ಹೈದರಾಬಾದ್: ವೈಶ್ಯಾವಾಟಿಕೆ ಜಾಲದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ ನಟಿ ಶ್ವೇತಾ ಬಸು ಅವರಿಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯ ಶನಿವಾರ ಕ್ಲೀನ್‌ಚಿಟ್ ನೀಡಿದೆ.
ಆರು ತಿಂಗಳ ಹಿಂದೆ ನಗರದ ಸ್ಟಾರ್ ಹೋಟೆಲೊಂದರಲ್ಲಿ ನಡೆಯಲಾಗಿತ್ತು ಎನ್ನಲಾದ ವೇಶ್ಯಾವಾಟಿಕೆ ರ್ಯಾಕೆಟ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಆಗ, ಶ್ವೇತಾ ಬಸು ಅವರ ಬಂಧನವಾಗಿತ್ತು. ಪ್ರಕರಣದಲ್ಲಿ ಕ್ಲೀನ್‌ಚಿಟ್ ಪಡೆದ ಬಗ್ಗೆ ಶ್ವೇತಾ ಬಸು ಹರ್ಷ ವ್ಯಕ್ತಪಡಿಸಿದ್ದಾರೆ.
'ಸೆಷನ್ಸ್ ಕೋರ್ಟ್ ಆದೇಶದಿಂದ ಕಳೆದ ಆರು ತಿಂಗಳಿನಿಂದ ನನ್ನ ಮೇಲಿದ್ದ ಅನುಮಾನ, ಕಳಂಕಗಳು ದೂರಾಗಿದ್ದು, ನನಗೆ ಹಾಗೂ ನನ್ನ ಹೆತ್ತವರಿಗೆ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ' ಎಂದು ತಿಳಿಸಿದ್ದಾರೆ.
2002ರಲ್ಲಿ ಮಕ್ಡೀ ಚಿತ್ರಕ್ಕಾಗಿ ಶ್ರೇಷ್ಠ ಬಾಲನಟಿ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದ ಶ್ವೇತಾ ಬಸು, ವೇಶ್ಯಾವಾಟಿಕೆ ರ್ಯಾಕೆಟ್‌ನಲ್ಲಿ ಬಂಧನಕ್ಕೊಳಗಾಗಿದ್ದು ದಿಗ್ಭ್ರಮೆ ಹುಟ್ಟಿಸಿತ್ತು.
Advertisement