ಹಾವಿನ ಹೊಟ್ಟೆ ನೋಡಬೇಕೆಂದು 'ಅನಕೊಂಡ' ನುಂಗುವಂತೆ ಮಾಡಿಕೊಂಡ!

ಇದು ನಿಜಕ್ಕೂ ಸಾವಿನ ಮನೆ ಹೊಕ್ಕು ಬಂದ ಸಾಹಸವೇ! ಮೃತ್ಯು ದವಡೆಯೊಳಕ್ಕೆ ನಸುನಗುತ್ತಾ ಸಾಗಿ, ಸಂತಸದಿಂದ...
ಪಾಲ್ ರಸೋಲಿ (ಚಿತ್ರ ಕೃಪೆ: ಟ್ವಿಟ್ಟರ್ )
ಪಾಲ್ ರಸೋಲಿ (ಚಿತ್ರ ಕೃಪೆ: ಟ್ವಿಟ್ಟರ್ )

ವಾಷಿಂಗ್ಟನ್: ಇದು ನಿಜಕ್ಕೂ ಸಾವಿನ ಮನೆ ಹೊಕ್ಕು ಬಂದ ಸಾಹಸವೇ! ಮೃತ್ಯು ದವಡೆಯೊಳಕ್ಕೆ ನಸುನಗುತ್ತಾ ಸಾಗಿ, ಸಂತಸದಿಂದ ಮರಳಿದ ಈ ಎಂಟೆದೆ ಬಂಟನಿದೆ ಹೊಡೀರಿ ಒಂದು ಸಲಾಮು.
ಹೌದು, ಕನಸಿನಲ್ಲಿ ಹಾವು ಕಾಣಿಸಿಕೊಂಡ್ರೇನೇ ಭೀತಿಗೊಳಗಾಗೋ ಸ್ಥಿತಿ ಇರುವಾಗ 27 ವರ್ಷದ ಈ ಮಹಾಶಯ ಹಾವಿನ ಬಾಯಿಯೊಳಗೇ ತೂರಿ ಅದರ ಹೊಟ್ಟೆ ಸೇರಿ ಅದರ ಪಚನ ಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಮಾಡಿಕೊಂಡು ಬಂದಿದ್ದಾನೆ. . ಇದನ್ನು ಡಿಸ್ಕವರಿ ವಾಹಿನಿ ಭಾನುವಾರ ರಾತ್ರಿ ಪ್ರಸಾರ ಮಾಡಿದೆ.

ಹುಚ್ಚು ಸಾಹಸ:
ಥ್ರಿಲ್ ಎಂಬ ಪದಕ್ಕೆ ಹೊಸ ವ್ಯಾಖ್ಯಾನ ಬರೆದ ಈತನ ಹೆಸರು ಪಾಲ್ ರಸೋಲಿ. ಪರಿಸರವಾದಿ ಹಾಗೂ ಟಿವಿ ನಿರೂಪಕನಾದ ಈತ ಅನಕೊಂಡಗಳ (ಹೆಬ್ಬೆಬ್ಬಾವು) ಹಾಗೂ ವನ್ಯ ಜೀವಿಗಳ ಮೇಲೆ ಸಾಕಷ್ಟು ಅಧ್ಯಯನ ಮಾಡಿದ್ದಾನೆ. ಅನೇಕ ಸಾಕ್ಷ್ಯ ಚಿತ್ರಗಳನ್ನೂ ತೆಗೆದಿದ್ದಾನೆ. ಆದರೆ, ಅದೇಕೋ ಏನೋ, ಅನಕೊಂಡಗಳೆಂದರೆ ಆತನಿಗೆ ಪಂಚಪ್ರಾಣ. ಅವುಗಳ ದಿನಚರಿ, ಆಹಾರಾಭ್ಯಸ, ಜೀವನ ಕ್ರಮ ಮುಂತಾದ ಬಗ್ಗೆ ಹೆಚ್ಚೆಚ್ಚು ತಲೆಕೆಡಿಸಿಕೊಂಡ ಈತ, ತನ್ನ ಪಂಚಪ್ರಾಣದ ಅಧ್ಯಯನಕ್ಕಾಗಿ ಪ್ರಾಣವನ್ನೇ ಮುಡಿಪಿಟ್ಟುಬಿಟ್ಟ.

ಆಮೇಲೇನಾಯ್ತು: ಇದನ್ನು ಖುದ್ದು ರಸೋಲಿ ಬಾಯಿಯಿಂದಲೇ ಕೇಳಬೇಕು. ಓವರ್ ಟು ರಸೋಲಿ

ನನ್ನ ಸಹಚರರ ನೆರವಿನಿಂದ ತನ್ನ ಕಾಲಿಗೆ ಮೊದಲೇ ಹಗ್ಗ ಕಟ್ಟಿಸಿಕೊಂಡಿದ್ದ ರಸೋಲಿ ಹಾವಿನ ಮುಂದೆ ಕೂತಿದ್ದೆ.  ಹಗ್ಗದ ಒಂದು ತುದಿ ಸಹಚರರ ನಿಯಂತ್ರಣದಲ್ಲಿತ್ತು. ಹಾವು ಇಂಚು ಇಂಚಾಗಿ ನನ್ನನ್ನು ನುಂಗಿದ ಕೂಡಲೇ ನನ್ನ ಕ್ಯಾಮೆರಾಗಳನ್ನು ಚಾಲೂ ಮಾಡಿದೆ.  ಇಡೀ ಭೂಮಿಯನ್ನೇ ನುಂಗುವಂತೆ ತೆರೆದಿದ್ದ ಅದರ ಬಾಯಿಯನ್ನು ನೋಡುತ್ತಲೇ ಮಂಡಿಯೂರಿ ಕುಳಿತಿದ್ದೆ. ಆ ಬಾಯಿ ನನ್ನ ಮುಖದವರೆಗೆ ಬಂದಿದ್ದಷ್ಟೇ ನನ್ನ ಗಮನಕ್ಕೆ  ಬಂದ ಕೊನೆಯ ದೃಶ್ಯ. ನಂತರ, ಬರೀ ಅಂಧಕಾರ. ಆದರೆ ಆ ಹೊತ್ತಿನಲ್ಲಿ ನಾನಿರುವ ಭೂಮಿಯನ್ನು ಮತ್ತೊಮ್ಮೆ ಕಡೇ ಬಾರಿ ನೋಡಬೇಕು ಅಂತೆನಿಸಿತು. ಆದರೆ ಅದಕ್ಕೆ ಅವಕಾಶವಿರಲಿಲ್ಲ. ಆದರೆ ಇಷ್ಟಿಷ್ಟೇ ಇಷ್ಟಿಷ್ಟೇ  ಹಾವಿನೊಳಗೆ ಹೋಗುವಾಗ ಒಂದು ಹಂತದಲ್ಲಿ ಹೆದರಿಕೆಯಾಯ್ತು. ತಕ್ಷಣವೇ ಮನಸ್ಸಿನಲ್ಲಿ ಇಲ್ಲದು ತುಮುಲಗಳು ಎದ್ದು, ಸಂಪೂರ್ಣ ಬೆವತು ಹೋದೆ. ನನಗಾದ ಅನುಭವವನ್ನು ಹೊರಗೆ ಹಗ್ಗ ಹಿಡಿದು ನಿಂತಿರುವ  ನನ್ನ ಸಹಚರರಿಗೆ ಕೂಗಿ ಹೇಳೋಣ ಎನ್ನುವಷ್ಟರಲ್ಲಿ ನನ್ನ ಮುಖ ಆಗಲೇ ಹಾವಿನ ಗಂಟಲನ್ನು ದಾಟಿತ್ತು, ನನ್ನ ಜಂಘಾಬಲವೇ ಉಡುಗಿ ಹೋಗಿತ್ತು. ಆದರೆ , ಕೆಲ ಹೊತ್ತಿನಲ್ಲೇ ಪುನಃ ನನ್ನ ಆತ್ಮಶಕ್ತಿ ಜಾಗೃತವಾಗಿ ಲವಲವಿಕೆಯಿಂದ ಪ್ರಯೋಗದಲ್ಲಿ ನಿರತನಾದ. ಕೆಲವೇ ಗಂಟೆಗಳಲ್ಲಿ ಮತ್ತೆ ಹೊರಬಂದೆ.'
ಒಟ್ಟಿನಲ್ಲಿ, ತನ್ನ ಸಾಹಸದಿಂದ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿರುವ ರಸೋಲಿ, ಈ ಸಾಹಸ ವನ್ಯಜೀವಿ ಅಧ್ಯಯನ ಮಾಡಬಯಸುವವರಿಗೆ ಉತ್ಸಾಹ ತುಂಬಲಿ ಎಂದು ಹಾರೈಸಿದ್ದಾನೆ.

ಹಾವೂ ಸಾಯಬಾರದು, ಪಾಲೂ ಮುರಿಯಬಾರದು- ಹಾಗಿತ್ತು ಯೋಜನೆ

ತನ್ನ ಕನಸು ತನ್ನ ಜೀವವನ್ನೇ  ತೆಗೆಯುತ್ತೆ ಎಂಬ ಸ್ಪಷ್ಟ ಅರಿವಿದ್ದ ರಸೋಲಿ, ಇದಕ್ಕಾಗಿ ಮಾಸ್ಟರ್  ಪ್ಲಾನ್ ಮಾಡಿದ. ಅದರಂತೆ ಒಂದು ರಕ್ಷಣಾ ಕವಚವಲನ್ನು ಸಿದ್ಧಪಡಿಸಿಕೊಂಡ. ಅದಕ್ಕೆ ಸ್ನೇಕ್ ಸೂಟ್ ಅಂತ ಹೆಸರಿಟ್ಟ . ತನ್ನನ್ನು ನುಂಗಿದ ಮೇಲೆ ಹಾವು ಮೈ ಮುರಿಯುವುದರಿಂದ ತಾನ ನುಚ್ಚು ನೂರಾಗದಂತೆ ಇದನ್ನು ಡಿಸೈನ್ ಮಾಡಿದ್ದ ರಸೋಲಿ. ಇದಕ್ಕೆ ಪುಟ್ಟ ಆಕ್ಸಿಜನ್ ಸ್ಯಾಷೆಯನ್ನು ಸೇರಿಸಿ, ಪುಟ್ಟ ಕ್ಯಾಮೆರಾಗಳನ್ನು ಜೋಡಿಸಿ, ಸ್ವಯಂ ಆಹುತಿಗೆ ಸಿದ್ಧನಾದ.

ನುಂಗುವಂತೆ ಮಾಡಿದ್ದ

ತನ್ನ ಕಾರ್ಯಸಾಧನೆಗಾಗಿ ಒಂದಿಬ್ಬರು ಸಹಚರರ ನೆರವು ಪಡೆದ ರಸೋಲಿ, ತನ್ನ ಪ್ರಯೋಗಕ್ಕಾಗಿ ಒಂದು ಹೆಣ್ಣು ಅನಕೊಂಡವನ್ನು ಆರಿಸಿಕೊಂಡ. ಸ್ನೇಕ್ ಸೂಟ್ ಧರಿಸಿ ಅದರ ಮುಂದೆ ಹೋಗಿ ಕುಳಿತುಬಿಟ್ಟ. ಮೊದಲಿಗೆ ಆ ಹಾವೂ ಈತನನ್ನು ಗಮನಿಸಿದರೂ ಸುಮ್ಮನಿತ್ತು.  ಆದರೆ ತಾನೇ, ಅದರ ಮೇಲೆ ದಾಳಿ ಮಾಡಲು ಸಿದ್ಧನಾಗಿರುವಂತೆ ನಟಿಸಿದ ರಸೋಲಿ, ಇವನ ನಟನೆಯಿಂದ ಪ್ರಚೋದನೆಗೊಳಗಾದ  ಹಾವು ಹತ್ತಿರಕ್ಕೆ ಬಂದು ಆತನ್ನು ನುಂಗಿತು.

ಹಾವಿನೊಳಗೆ ಹೋಗುವಾಗ ಒಂದು ಹಂತದಲ್ಲಿ ಹೆದರಿಕೆಯಾತ್ತು. ನನ್ನ ಸ್ನೇಕ್ ಸೂಟ್ ಇಕ್ಕೆಲಗಳಲ್ಲಿ ಬಿರುಕು ಕಾಣಿಸಿಕೊಂಡು ನನ್ನ ಎರಡೂ ಕೈಗಳು ಹೊರಕ್ಕೆ ಚಾಚಿದಂತೆ ಅನಿಸತೊಡಗಿತು. ನನ್ನ ಎದೆ ಬಿರಿಯಿತು. ಆದರೆ ಕೆಲ ಹೊತ್ತಿನಲ್ಲೇ ನ್ನನ ಸ್ನೇಕ್ ಸೂಟ್ ಹರಿದಿಲ್ಲ ಎಂಬುದು ಮನದಟ್ಟಾಯಿತು. ತಕ್ಷಣವೇ ಹೋದ ಜೀವ ಬಂದ ಹಾಗಾಯ್ತು.

-ಪಾಲ್ ರಸೋಲಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com