ಉಬರ್ ಸಂಚಾರ ವ್ಯವಸ್ಥೆಗೆ ನಿಷೇಧ ಹೇರಿದ ದೆಹಲಿ ಸರ್ಕಾರ

ದೆಹಲಿಯಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸುತ್ತಿರುವ ಉಬರ್ ಕ್ಯಾಬ್ನ ಸಂಚಾರಕ್ಕೆ ದೆಹಲಿ...
ಉಬರ್ ಸಂಚಾರ ವ್ಯವಸ್ಥೆಗೆ ನಿಷೇಧ ಹೇರಿದ ದೆಹಲಿ ಸರ್ಕಾರ

ನವದೆಹಲಿ: ದೆಹಲಿಯಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸುತ್ತಿರುವ ಉಬರ್ ಕ್ಯಾಬ್ನ ಸಂಚಾರಕ್ಕೆ ದೆಹಲಿ ಸರ್ಕಾರ ಸೋಮವಾರ ನಿಷೇಧವೇರಿದೆ.

ಜಗತ್ತಿನಾದ್ಯಂತ 200ಕ್ಕಿಂತಲೂ ಹೆಚ್ಚು ನಗರಗಳಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸುತ್ತಿರುವ ಈ ಕ್ಯಾಬ್ ಆರ್ಬಿಐ ನಿಯಮಕ್ಕೆ ಬದ್ಧವಾಗಿಲ್ಲ ಎಂಬ ವಿಷಯವೂ ಬಹಿರಂಗವಾಗಿದೆ.

ಉಬರ್ ಕ್ಯಾಬ್ ಗೆ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ಮಾತ್ರ ಇದ್ದು, ದೆಹಲಿಯಲ್ಲಿ ಬಾಡಿಗೆ ಸೇವೆ ನೀಡಲು ಅನುಮತಿ ಇಲ್ಲ. ಆದ್ದರಿಂದ ಉಬರ್ ಟ್ಯಾಕ್ಸಿ ಕಂಪನಿ ಅನಧಿಕೃತ ಸರ್ವೀಸ್ ಮಾಡುತ್ತಿದೆ ಎಂದು ರಸ್ತೆ ಸಾರಿಗೆ ಸಂಚಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಉಬರ್ ಕ್ಯಾಬ್ ನ ಸಂಚಾರ ವ್ಯವಸ್ಥೆಯ ಮೇಲೆ ದೆಹಲಿ ಸರ್ಕಾರ ನಿಷೇಧವೇರಿದೆ.
ಉಬರ್ ಕ್ಯಾಬ್ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು
2011ರಲ್ಲಿ ದೆಹಲಿಯ ಮೆಹರೌಲಿ ಪ್ರದೇಶದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈತ ತಿಹಾರ್ ಜೈಲಿನಲ್ಲಿ 7 ತಿಂಗಳು ಶಿಕ್ಷೆ ಅನುಭವಿಸಿದ್ದ ಎಂಬ ವಿಚಾರವನ್ನು ಸ್ವತಃ ಆತನೇ ಪೊಲೀಸರಿಗೆ ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com