ಆಘ್ಫಾನಿಸ್ತಾನದಿಂದ ವಿದೇಶಿ ಸೇನೆ ವಾಪಸ್

ಅಲ್ ಖೈದಾ ಉಗ್ರರ ವಿರುದ್ಧ ಆಫ್ಘಾನಿಸ್ತಾನದಲ್ಲಿ ಅಮೆರಿಕ...
ಆಘ್ಫಾನಿಸ್ತಾನದಿಂದ ವಿದೇಶಿ ಸೇನೆ ವಾಪಸ್

ಕಾಬೂಲ್: ಅಲ್ ಖೈದಾ ಉಗ್ರರ ವಿರುದ್ಧ ಆಘ್ಫಾನಿಸ್ತಾನದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳ ಹದಿಮೂರು ವರ್ಷಗಳಷ್ಟು ಸುಧೀರ್ಘ ಕಾರ್ಯಾಚರಣೆ ಸೋಮವಾರ ಕೊನೆಗೊಂಡಿದೆ.

2001, ಸೆ.11 ರಂದು ಅಮೆರಿಕದ ವಿಶ್ವವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ಅಲ್ ಖೈದಾ ನಡೆಸಿದ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಮತ್ತು ನ್ಯಾಟೋಪಡೆಗಳು ಅಲ್ ಖೈದಾ ಉಗ್ರರ ದಮನಕ್ಕೆ ಮುಂದಾಗಿದ್ದವು. ಕರ್ಫ ಆಘ್ಫಾನಿಸ್ತಾನದ ಮೇಲೆ ನಿಯಂತ್ರಣ ಹೊಂದಿದ್ದ ತಾಲಿಬಾನ್ ಉಗ್ರರು ಹಿಮ್ಮೆಟ್ಟುವಂತೆ ಮಾಡಿ ಪ್ರಜಾಪ್ರಭುತ್ವ ರೀತಿಯಲ್ಲಿ ಅಧಿಕಾರಕ್ಕೆ ಬಂದ ಹಮೀದ್ ಕರ್ಜಾಯಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ನೆರವು ನೀಡಿದ್ದವು.

ಆದರೆ, ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹತ್ಯೆ ಬಳಿಕ ತಾಲಿಬಾನ್ ಉಗ್ರರ ವಿರುದ್ಧದ ಹೋರಾಟವನ್ನು ಅಮೆರಿಕ ಹಂತ ಹಂತವಾಗಿ ಚುನಾಯಿತ ಸರ್ಕಾರಕ್ಕೆ ವಹಿಸುವ ಕಾರ್ಯ ಆರಂಭಿಸಿತ್ತು. ಅದರಂತೆ ವಿದೇಶಗಳು ಆಫ್ಘನ್ ನಲ್ಲಿ ತಮ್ಮ ಸೇನಾ ಬಲವನ್ನು ವಾಪಸ್ ಕರೆಸಿಕೊಳ್ಳುವ ಕೆಲಸ ಆರಂಭಿಸಿದ್ದವು. ಇದೀಗ ಆಫ್ಘಾನ್ ಕಾರ್ಯಾಚರಣೆಯನ್ನು ಅಧಿಕೃತವಾಗಿ ಕೊನೆಗೊಳಿಸಿವೆ. ಇನ್ನು ಮುಂದೆ ಅಮೆರಿಕ ಮತ್ತು ನ್ಯಾಟೋಪಡೆಗಳ ಕಾರ್ಯ ಸ್ಥಳೀಯ ಸೇನೆ ಹಾಗೂ ಪೊಲೀಸರಿಗೆ ತರಬೇತಿ ನೀಡುವ ಕೆಲಸಕ್ಕೆಷ್ಟೇ ಸೀಮಿತವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com