ಮಲಾಲಾ ಸಹ ನನ್ನ ಮಗಳಿದ್ದಂತೆ: ಕೈಲಾಶ್ ಸತ್ಯಾರ್ಥಿ

ಕೈಲಾಶ್ ಸತ್ಯಾರ್ಥಿ, ಮಲಾಲಾ ಯೂಸೂಫ್ ಝೈ,
ಕೈಲಾಶ್ ಸತ್ಯಾರ್ಥಿ, ಮಲಾಲಾ ಯೂಸೂಫ್ ಝೈ,

ಓಸ್ಲೋ: ನಾಳೆ ನೊಬೆಲ್ ಶಾಂತ್ರಿ ಪ್ರಶಸ್ತಿ ಸ್ವೀಕರಿಸಲಿರುವ ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದ ಮಲಾಲಾ ಯೂಸೂಫ್ ಝೈ ನಾರ್ವೆ ರಾಜಧಾನಿ ಓಸ್ಲೋವಕ್ಕೆ ತೆರಳಿದ್ದಾರೆ.

ಓಸ್ಲೋದಲ್ಲಿ ಇಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ತಮಗೆ ನೊಬೆಲ್ ಪ್ರಶಸ್ತಿ ಸಿಕ್ಕಿರುವುದು ಖುಷಿ ತಂದಿದೆ ಎಂದರು.

ಈ ವೇಳೆ ಮಾತನಾಡಿದ ಕೈಲಾಶ್ ಸತ್ಯಾರ್ಥಿ, ತನಗೆ ಸಂದ ಗೌರವ ವಿಶ್ವದ ಶೋಚನೀಯ ಸ್ಥಿತಿಯಲ್ಲಿರುವ ಮಕ್ಕಳ ಸಮುದಾಯಕ್ಕೆ ಸಿಕ್ಕ ಗೌರವ. ಮಲಾಲಾ ಕೂಡ ನನ್ನ ಮಗಳಿದ್ದಂತೆ. ಸದ್ಯ ಪ್ರಪಂಚದ ಮಕ್ಕಳ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ ಇಂತಹಃ ಸಂದಿಗ್ಧತೆಯಲ್ಲಿ ಈ ಪ್ರಶಸ್ತಿ ಬಂದಿರುವುದರಿಂದ ನೈತಿಕತೆಯ ಪ್ರಶ್ನೆ ಉದ್ಬವಿಸುತ್ತದೆ ಎಂದು ಹೇಳಿದರು.

60 ವರ್ಷದ ಸತ್ಯಾರ್ಥಿ ಹಾಗೂ 17 ವರ್ಷದ ಮಲಾಲಾ ಯೂಸೂಫ್ ಝೈ ಇಬ್ಬರು ಪ್ರಸಕ್ತ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದರು. ನಾಳೆ ಇಬ್ಬರು ಅತಿಥಿಗಳು ಪ್ರಶಸ್ತಿ ಪುರಸ್ಕಾರಿಸಲಿದ್ದು, 1.1 ಮಿಲಿಯನ್ ಡಾಲರ್ ಮೊತ್ತ ಪಡೆಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com