ರಾಜೀವ್ ಚಂದ್ರಶೇಖರ್
ದೇಶ
ಶೌರ್ಯ ಪುರಸ್ಕೃತರಿಗೆ ಏಕರೂಪ ಪುರಸ್ಕಾರ
ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಿಗೆ ವಾರ್ಷಿಕ ರು. 1.25 ಲಕ್ಷ ಗೌರವಧನ ನೀಡಲಾಗುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ...
ನವದೆಹಲಿ: ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಿಗೆ ವಾರ್ಷಿಕ ರು. 1.25 ಲಕ್ಷ ಗೌರವಧನ ನೀಡಲಾಗುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡುರವ ಮನೋಹರ ಪರಿಕ್ಕರ್, ಶೌರ್ಯ ಪ್ರಶಸ್ತಿ ಪಡೆದವರಿಗೆ ರಾಜ್ಯಗಳು ನೀಡುವ ನಗದು ಬಹುಮಾನದ ಮೊತ್ತ ಏಕಪ್ರಕಾರವಾಗಿಲ್ಲ. ಇದು ರಾಜ್ಯದಿಂಜ ರಾಜ್ಯಕ್ಕೆ ವ್ಯತ್ಯಾಸ ಇದೆ. ಆದರೆ ಕೇಂದ್ರ ಸರ್ಕಾರವು ಶೌರ್ಯ ಪ್ರಶಸ್ತಿ ಪಡೆದವರಿಗೆ ಏಕರೂಪದ ನಗದು ಬಹುಮಾನ ಮತ್ತು ಸೌಲಭ್ಯಗಳನ್ನು ನಿಗದಿ ಮಾಡಿದೆ ಎಂದು ವಿವರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ