ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಕೋರಿ ವಿ.ಹಿ.ಪ ಅರ್ಜಿ

ಕೆಲ ಹಿಂದುಪರ ಸಂಘಟನೆಗಳು ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ಹವಣೀಸುತ್ತಿವೆ...
ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಕೋರಿ ವಿ.ಹಿ.ಪ ಅರ್ಜಿ
ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಕೋರಿ ವಿ.ಹಿ.ಪ ಅರ್ಜಿ

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿನ ಮಸೀದಿಗಳಲ್ಲಿ ಪ್ರಾರ್ಥನೆ ವೇಳೆ ಉಪಯೋಗಿಸಲ್ಪಡುವ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿದೆ.

ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನಾ ಪಕ್ಷಗಳು ಸಂಯುಕ್ತವಾಗಿ ಆಡಳಿತ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲ ಹಿಂದುಪರ ಸಂಘಟನೆಗಳು ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ಹವಣೀಸುತ್ತಿವೆ.

ಈ ಕುರಿತು ಮುಂಬೈನಲ್ಲಿ ವಿಶ್ವ ಹಿಂದೂ ಪರಿಷತ್ ಸಂಘಟನೆಯ ನಾಯಕ ವೆಂಕಟೇಶ್ ಆಪ್ತಿಯೋ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಹಾರಾಷ್ಟ್ರಾದ್ಯಂತ ಇರುವ ಮಸೀದಿಗಳಲ್ಲಿ, ಪ್ರಾರ್ಥನೆ ಸಮಯದಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸುತ್ತಿರುವುದನ್ನು ಸರ್ಕಾರ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಿಂದು ಧರ್ಮದ ಪ್ರಮುಖ ಹಬ್ಬಗಳಾದ ಗಣೇಶ ಚುತುರ್ಥಿ, ನವರಾತ್ರಿ ಹಬ್ಬಗಳಂದು ಧ್ವನಿವರ್ಧಕ ಉಪಯೋಗಿಸುವಾಗ ಕೆಲ ಸಂಘಟನೆಗಳನ್ನು ಈ ವಿರುದ್ಧ ಪ್ರಶ್ನೆ ಎಬ್ಬಿಸಿದ್ದವು. ಅದರಂತೆಯೇ ಮಸೀದಿಗಳಲ್ಲೂ ಧ್ವನಿವರ್ಧಕಗಳ ಉಪಯೋಗವನ್ನು ನಿಷೇಧಿಸಬೇಕು ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗುವ ಫ್ಯಾಶನ್ ಶೋ ಕಾರ್ಯಕ್ರಮಕ್ಕೆ ತಡೆ ವಿಧಿಸಬೇಕೆಂಬುದನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com