ನವದೆಹಲಿ: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಘಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನಗರದಲ್ಲಿನ್ನು ಕಣ್ಗಾವಲಿಗೆ ಡ್ರೋಣ್‌ಗಳನ್ನು ಬಳಸಲು ನಿರ್ಧರಿಸಿದ್ದಾರೆ.
ಅದರಂತೆ ರಾತ್ರಿ ವೇಳೆಯೂ ವಿಡಿಯೋ, ಚಿತ್ರಗಳನ್ನು ತೆಗೆಯಬಲ್ಲ ಸಾಮರ್ಥ್ಯವಳ್ಳ ಡ್ರೋಣ್‌ಗಲು ಮುಂದಿನ ತಿಂಗಳಿಂದ ರಾಜಧಾನಿ ಮೇಲೆ ಕಣ್ಣಿಡಲಿದೆ.
ಹಣಕಾಸು ಕಂಪನಿಯೊಂದರ ಅಧಿಕಾರಿಯೊಬ್ಬರ ಮೇಲೆ ಯೂಬರ್ ಕ್ಯಾಬ್ ಚಾಲಕ ನಡೆಸಿದ ಅತ್ಯಾಚಾರ ಪ್ರಕರಣದ ಬಳಿಕ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಆತಂಕ ಮತ್ತಷ್ಟು ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳಿರುವ ಡ್ರೋಣ್‌ಗಳನ್ನು ಕಣ್ಗಾವಲಿಗಾಗಿ ಬಳಸಲಿದ್ದಾರೆ.
ಹಲವು ಹೆಣ್ಣುಮಕ್ಕಳಿಗೆ ಕಿರುಕುಳ
ಸದ್ಯ ಪೊಲೀಸರ ವಶದಲ್ಲಿರುವ ಯೂಬರ್ ಕ್ಯಾನ್‌ನ ಚಾಲಕ ಶಿವಕುಮಾರ್ ಹಿಂದೆ ತನ್ನ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದ ಹಲವು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನುವ ವಿಚಾರ ಬಹಿರಂಗವಾಗಿದೆ. ಗುರ್‌ಗಾಂವ್ ಮಾಲ್‌ನಿಂದ ದೆಹಲಿ ಕಡೆಗೆ ಪ್ರಯಾಣಿಸುವ ಹೆಣ್ಣು ಮಕ್ಕಳನ್ನೇ ಗುರಿಯಾಗಿಟ್ಟುಕೊಂಡು ಈತ ಲೈಂಗಿಕ ಕಿರುಕುಳ ನೀಡುತ್ತಿದ್ದ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ