ಕತ್ರಿನಾ ಕೈಫ್, ಸಲ್ಮಾನ್ ಖಾನ್  (ಸಾಂದರ್ಭಿಕ ಚಿತ್ರ)
ಕತ್ರಿನಾ ಕೈಫ್, ಸಲ್ಮಾನ್ ಖಾನ್ (ಸಾಂದರ್ಭಿಕ ಚಿತ್ರ)

ಕಾಲು"ಗರ್ಲ್" ಕತ್ರೀನಾ

ಕತ್ರಿನಾ ಕೈಫ್ ಳನ್ನು ಬಾಲಿವುಡ್ ಗೆ ಪರಿಚಯಿಸಿದ್ದೇ ಸಲ್ಮಾನ್ ಅಂತಲೂ...
Published on

ಕತ್ರಿನಾ ಕೈಫ್ ಳನ್ನು ಬಾಲಿವುಡ್ ಗೆ ಪರಿಚಯಿಸಿದ್ದೇ ಸಲ್ಮಾನ್ ಅಂತಲೂ, ಆತ ಇನ್ನೇನು ಆಕೆಯನ್ನು ಮದುವೆಯಾಗಿ ಬಿಡ್ತಾನೆ ಅಂತಲೂ ಹರಡಿ ಹರಡಿ ತಣ್ಣಗಾಗುತ್ತಿದ್ದ ಸುದ್ದಿಗಳ್ಯಾವುವುವೂ ಸುಳ್ಳಲ್ಲ. ಆದರೆ ಈಗ ಕತ್ರೀನಾ ಸ್ವತಂತ್ರಳಾಗಿ ಬಾಲಿವುಡ್ಡಲ್ಲಿ ಎತ್ತರಕ್ಕೆ ಬೆಳೆದಿದ್ದಾಳೆ.

ಸಲ್ಮಾನ್ನನ್ನು ಮದುವೆಯಾಗೊಲ್ಲ ಎಂಬುದನ್ನೂ ಯಾವತ್ತೋ ಹೇಳಿಯಾಗಿದೆ. ಹಾಗಂತೆ ಸಲ್ಲು ಭಾಯಿಯನ್ನು ಯಾವತ್ತೂ ಎದುರು ಹಾಕಿಕೊಂಡವಳಲ್ಲ ಕ್ಯಾಟ್. ಆತ ಈಕೆಯನ್ನು ಎಷ್ಟೇ ಗೋಳುಹೊಯ್ದುಕೊಂಡರೂ, ಕಾಲೆಳೆದರೂ ನಗುನಗುತ್ತಲೇ ಸಹಿಸಿಕೊಳ್ತಾಳೆ. ಆದರೆ ಸಲ್ಲು ಮಾತ್ರ ಅವಕಾಶ ಸಿಕ್ಕಾಗೆಲ್ಲೆ ಅವಳ ಬಗ್ಗೆ ತರಲೆ ಕಮೆಂಟ್ ಪಾಸ್ ಮಾಡಿ ಖುಷಿಪಡುತ್ತಾನೆ.

ಕತ್ರೀನಾ ರಣಬೀರ್ ಕಪೂರ್ ಅಫೇರ್ ಜೋರಾಗಿ ನಡೆಯುತ್ತಿರೋದನ್ನು ತಿಳಿದು ಒಳಗೊಳಗೇ ಉರಿದುಕೊಂಡಿರೋ ಸಲ್ಲು, ಪಬ್ಲಿಕ್ ಫಂಕ್ಷನ್ನೊಂದರಲ್ಲಿ ಕತ್ರೀನಾ ಕಪೂರ್ ಎಂದು ಕರೆದು ಮುಜುಗರಕ್ಕೊಳಪಡಿಸಿದನಂತೆ ಅಷ್ಟೂ ಸಾಲದೆಂಬಂತೆ, 'ಕತ್ರೀನಾ ಖಾನ್ ಆಗೋ ಅವಕಾಶ ಕೊಟ್ಟಿದ್ದೆ. ಆಕೆಯೇ ಅದನ್ನು ಕಳೆದುಕೊಂಡಳು' ಅಂತಲೂ ಮೈಕಲ್ಲಿ ಹೇಳಿ ಕಿಸಕ್ಕೆಂದಿದ್ದನಂತೆ. ಈಗ ಬಿಗ್ ಬಾಸ್ 8ರಲ್ಲಿ ಮತ್ತೊಮ್ಮೆ ಕತ್ರೀನಾ ಕೈಫ್ ಕಾಲೆಳೆದಿದ್ದಾನೆ ಸಲ್ಲು. ಕತ್ರೀನಾಳದ್ದು ಅದ್ಭುತ ಕಾಲುಗಳು ಎಂದು ಕಾಲುಗಳ ಬಗ್ಗೆ ಕಾಲುಗಂಟೆ ಮಾತಾಡಿ, ಕತ್ರೀನಾಳನ್ನು ಮುಜುಗರಕ್ಕೀಡು ಮಾಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com