ಪೇಶಾವರ ದಾಳಿಯ ಮಾಸ್ಟರ್ ಮೈಂಡ್ ಫಜುಲುಲ್ಲ ಹತ್ಯೆ

ಫಜುಲುಲ್ಲ ಆಫ್ಘಾನಿಸ್ತಾನದ ಗಡಿಯಲ್ಲಿ ಅಡಗಿ ಕುಳಿತಿದ್ದ ಮಾಹಿತಿ ತಿಳಿದ ಪಾಕಿಸ್ತಾನ ವೈಮಾನಿಕ ದಾಳಿ...
ತೆಹ್ರೀಕ್-ಇ-ತಾಲಿಬಾನ್ ಮುಖ್ಯಸ್ಥ ಮೌಲಾನ ಫೆಜುಲುಲ್ಲಾ
ತೆಹ್ರೀಕ್-ಇ-ತಾಲಿಬಾನ್ ಮುಖ್ಯಸ್ಥ ಮೌಲಾನ ಫೆಜುಲುಲ್ಲಾ

ಆಫ್ಘಾನಿಸ್ತಾನ: ಇತ್ತಿಚೆಗೆ ಪೇಶಾವರದ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿ 131 ಮಕ್ಕಳನ್ನು ಗುಂಡಿಟ್ಟು ಸಾಹಿಸಿದ್ದ, ತೆಹ್ರೀಕ್-ಇ-ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಮೌಲಾನ ಫಜುಲುಲ್ಲನನ್ನು ಪಾಕಿಸ್ತಾನ ಸೇನಾ ಪಡೆ ವೈಮಾನಿಕ ದಾಳಿ ಮೂಲಕ ಹತ್ಯೆಗೊಳಿಸಿದೆ. ಪಾಕಿಸ್ತಾನ ಸರ್ಕಾರವು ಫಜುಲುಲ್ಲ ಸಾವಿನ ವಿಚಾರವನ್ನು ಖಚಿತಪಡಿಸಿದೆ.

ತೆಹ್ರೀಕ್-ಇ-ತಾಲಿಬಾನ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಮೌಲಾನ ಫಜುಲುಲ್ಲ ಆಫ್ಘಾನಿಸ್ತಾನದ ಗಡಿಯಲ್ಲಿ ಅಡಗಿ ಕುಳಿತಿದ್ದ ಮಾಹಿತಿ ತಿಳಿದ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ.

ಪಾಕಿಸ್ತಾನಕ್ಕೆ ಆಫ್ಘಾನಿಸ್ತಾನ ಸಾಥ್ ನೀಡಿದ್ದು ಜಂಟಿಯಾಗಿ ಕಾರ್ಯಾಚರಣೆ ನಡೆಸಿತು. ವೈಮಾನಿಕ ದಾಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನ ರಕ್ಷಣಾ ಸಚಿವಾಲಯ, ಮೌಲಾನ ಫಜುಲುಲ್ಲ ಸೇರಿದಂತೆ ದಾಳಿಯಲ್ಲಿ ೭೭ ಮಂದಿ ಉಗ್ರರು ಸಹ ಹತ್ಯೆಯಾಗಿರುವುದರ ಬಗ್ಗೆ ಪಾಕ್ ಸೇನೆ ಖಚಿತಪಡಿಸಿದೆ. 

ರೇಡಿಯೋ ಮುಲ್ಲಾ ಎಂಬ ಹೆಸರನ್ನು ಪಡೆದಿದ್ದ ಫಜುಲುಲ್ಲ, ಪೇಶಾವರದಲ್ಲಿ ನಡೆದ ಮಕ್ಕಳ ಮೇಲಿನ ರಾಕ್ಷಸಿ ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಆಫ್ಘಾನಿಸ್ತಾನದ ಸಹಾಯದೊಂದಿಗೆ ಆತನ ಹತ್ಯೆ ಮಾಡಿ ಹೊಡೆದುರುಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com