ಪ್ರಮುಖ ರಾಜಕಾರಣಿಗಳ ಮಕ್ಕಳ ಹತ್ಯೆ: ತಾಲಿಬಾನ್ ಬೆದರಿಕೆ

ತಾಲಿಬಾನಿ ಉಗ್ರರಿಗೆ ಜಾರಿ ಮಾಡಿರುವ ಗಲ್ಲು ಶಿಕ್ಷೆಯನ್ನು ಕೂಡಲೇ ನಿಲ್ಲಿಸಬೇಕು...
ಪೇಶಾವರ ಶಾಲೆಯ ದಾಳಿಯಲ್ಲಿ 130ಕ್ಕೂ ಹೆಚ್ಚು ಅಮಾಯಕ ಮಕ್ಕಳನ್ನು ಬಲಿಯಾಗಿದ್ದರು.
ಪೇಶಾವರ ಶಾಲೆಯ ದಾಳಿಯಲ್ಲಿ 130ಕ್ಕೂ ಹೆಚ್ಚು ಅಮಾಯಕ ಮಕ್ಕಳನ್ನು ಬಲಿಯಾಗಿದ್ದರು.

ನವದೆಹಲಿ: 'ಪಾಕಿಸ್ತಾನದಲ್ಲಿ ಜೈಲುವಾಸ ಅನುಭವಿಸುತ್ತಿರುವ ತಾಲಿಬಾನಿ ಉಗ್ರರಿಗೆ ಜಾರಿ ಮಾಡಿರುವ ಗಲ್ಲು ಶಿಕ್ಷೆಯನ್ನು ಕೂಡಲೇ ನಿಲ್ಲಿಸಬೇಕು, ಇಲ್ಲವಾದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಮಕ್ಕಳು ಸೇರಿದಂತೆ ರಾಜಕಾರಣಿಗಳ ಮಕ್ಕಳನ್ನು ಹತ್ಯೆ ಮಾಡುತ್ತೇವೆ'

ಇದು ತೆಹ್ರಿಕ್-ಇ-ತಾಲಿಬಾನ್ ಸಂಘಟನೆ ಮುಖ್ಯಸ್ಥ ಮೌಲಾನ ಫಜಲುಲ್ಲ ಹತ್ಯೆಯಾಗುವ ಮುನ್ನ ಪಾಕಿಸ್ತಾನಕ್ಕೆ ಬರೆದಿದ್ದ ಬೆದರಿಕೆ ಪತ್ರ.

ತಾಲಿಬಾನ್ ಉಗ್ರ ಸಂಘಟನೆಯು, ಕಳೆದ ವಾರ ಪೇಶಾವರ ಸೈನಿಕ ಶಾಲೆಯ ದಾಳಿ ನಡೆಸಿ 130ಕ್ಕೂ ಹೆಚ್ಚು ಅಮಾಯಕ ಮಕ್ಕಳನ್ನು ಬಲಿತೆಗೆದುಕೊಂಡಿದ್ದ ಬೆನ್ನಲ್ಲೇ ಪಾಕ್ ಸರ್ಕಾರ, ಪಾಕ್ ನಲ್ಲಿರುವ ಜೈಲು ವಾಸ ಅನುಭವಿಸುತ್ತಿರು ತಾಲಿಬಾನಿ ಉಗ್ರರರೆಲ್ಲರಿಗೂ ಕೂಡಲೇ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ಆದೇಶ ಹೊರಡಿಸಿತ್ತು. ಪಾಕಿಸ್ತಾನದ ಆದೇಶದ ಮೇರೆಗೆ ಜೈಲು ವಾಸದಲ್ಲಿರುವ ತಾಲಿಬಾನಿ ಉಗ್ರರ ಪೈಕಿ ಕೆಲವರಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.

ಇದರಿಂದ ಕುಪಿತಗೊಂಡಿರುವ ತೆಹ್ರಿಕ್-ಇ-ತಾಲಿಬಾನ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನ ಫಜಲುಲ್ಲ, ತಾಲಿಬಾನಿ ಉಗ್ರರಿಗೆ ಜಾರಿ ಮಾಡಿರುವ ಗಲ್ಲು ಶಿಕ್ಷೆಯನ್ನು ಕೂಡಲೇ ನಿಲ್ಲಿಸಬೇಕು, ಇಲ್ಲವಾದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ರಾಜಕಾರಣಿಗಳ ಮಕ್ಕಳನ್ನು ಹತ್ಯೆ ನಡೆಸುವುದಾಗಿ ಪತ್ರದ ಮುಕಾಂತರ ಎಚ್ಚರಿಕೆಯ ನೀಡಿದ್ದನು.

ತಾಲಿಬಾನ್ ಉಗ್ರ ಸಂಘಟನೆಯಿಂದ ಪತ್ರ ಸ್ವೀಕರಿಸಿದ್ದ ಪಾಕ್, ಮೌಲಾನ ಫೆಜಲುಲ್ಲ ಅಫ್ಘಾನಿಸ್ತಾನದಲ್ಲಿ ಅಡಿಗಿರುವ ವಿಷಯ ತಿಳಿದು ಇಂದು ಬೆಳಿಗ್ಗೆ, ಅಫ್ಘಾನಿಸ್ತಾನ ಸರ್ಕಾರದ ಸೇನಾ ಪಡೆ ಸಹಾಯದೊಂದಿಗೆ ವೈಮಾನಿಕ ದಾಳಿ ನಡೆಸಿ, ಆತನನ್ನು ಹೊಡೆದುರುಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com