ಆಂಧ್ರ: ಹಂದಿ ಜ್ವರಕ್ಕೆ 8 ಮಂದಿ ಬಲಿ

ಸ್ಥಳೀಯ ಆಡಳಿತ ನಗರದೆಲ್ಲೆಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ...
ಹಂದಿ ಜ್ವರ: ನಗರದೆಲ್ಲೆಡೆ ಮುಂಜಾಗ್ರತಾ ಕ್ರಮ
ಹಂದಿ ಜ್ವರ: ನಗರದೆಲ್ಲೆಡೆ ಮುಂಜಾಗ್ರತಾ ಕ್ರಮ

ಹೈದರಾಬಾದ್: ವಿಭಜಿತ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹಂದಿ ಜ್ವರ ಕಾಣಿಸಿಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಹಂದಿ ಜ್ವರ ಸೋಂಕಿನ ಪರೀಕ್ಷೆಗಾಗಿ ಸಾರ್ವಜನಿಕರು ಆಸ್ಪತ್ರೆಗಳತ್ತ ದಾವಿಸ್ತುತ್ತಿದ್ದಾರೆ.

ಈ ಮಧ್ಯೆ ಛತ್ತೀಸ್‌ಘಡ ಮತ್ತು ಪಂಜಾಬ್‌ಗಳಲ್ಲಿ ಕಾಗೆ ಸೇರಿದಂತೆ ಇತರೆ ಪಕ್ಷಿಗಳು ಇದ್ದಕ್ಕಿದಂತೆ ಸತ್ತು ಬೀಳುತ್ತಿವೆ.

ಪಕ್ಷಿಗಳ ನಿಗೂಡ ಸಾವಿಗೆ ಕಾರಣವೇನೆಂಬುದು ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ನಗರದೆಲ್ಲೆಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಳಿಗಾಲದಲ್ಲಿ ಹಂದಿ ಜ್ವರ, ಹಕ್ಕಿ ಜ್ವರದಂತ ರೋಗಗಳನ್ನು ನಿಯಂತ್ರಿಸುವುದು ಸ್ಥಳೀಯ ಆಡಳಿತ್ತಕೆ ದೊಡ್ಡ ಸವಾಲಾಗಿದ್ದು, ರೋಗ ನಿಯಂತ್ರಣ ಮಾಡುವುದು ಕಷ್ಟ ಸಾಧ್ಯ ಎಂದು ತಮ್ಮ ಅಸಹಾಯಕತೆಯನ್ನು ತೋರ್ಪಡಿಸುತ್ತಿದ್ದಾರೆ.

ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಭರದಿಂದ ಸಾಗಿದೆ. ಛತ್ತೀಸ್‌ಘಡದಲ್ಲಿ ಹಕ್ಕಿಜ್ವರ ಭೀತಿಯಿಂದ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಆಂಧ್ರ, ತೆಲಂಗಾಣ ಸರ್ಕಾರಗಳು ಮುಂಜಾಗ್ರತೆ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com