

ಜಮ್ಮು: ಇಂಡೋ ಪಾಕ್ ಗಡಿ ಪ್ರದೇಶದಲ್ಲಿ ಸುಮಾರು 4 ಲಕ್ಷ ಭಾರತದ ನಕಲಿ ನೋಟುಗಳನ್ನು ಬಿಎಸ್‌ಎಫ್ ಯೋಧರು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಗಸ್ತು ತಿರುಗುತ್ತಿದ್ದ ಗಡಿ ಭದ್ರತಾ ಪಡೆ ಯೋಧರು, ಜಮ್ಮು ಜಿಲ್ಲೆಯ ಆರ್.ಎಸ್‌ಪುರಂ ಪ್ರದೇಶದಲ್ಲಿ ನಕಲಿ ನೋಟುಗಳಿದ್ದ ಚೀಲವನ್ನು ಪತ್ತೆಯಹಚ್ಚಿದ್ದಾರೆ. ಇದನ್ನು ಪರಿಶೀಲನೆ ನಡೆಸಿದಾಗ 2 ಪೊಟ್ಟಣಗಳಿದದ್ದು ಕಂಡುಬಂದಿತು. ಒಂದು ಹಳದಿ ಪೊಟ್ಟಣ, ಮತ್ತೊಂದು ಸಿಗರೇಟ್ ಪೊಟ್ಟಣವಿದ್ದದ್ದು ತಿಳಿದುಬಂದಿದೆ.
ಹಳದಿ ಪೊಟ್ಟವನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಸಾವಿರ ರೂಪಾಯಿ ಮುಖಬೆಲೆಯ 399 ನೋಟುಗಳಿದ್ದದು ಕಂಡುಬಂದಿದೆ. ಭಾರತ ಸರ್ಕಾರದ ನೋಟುಗಳು ಎಂದು ಬಿಎಸ್‌ಎಫ್ ಹಿರಿಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಈ ಕುರಿತು ಆರ್.ಎಸ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ.
Advertisement