ಉಗ್ರರಿಗೆ ಉಡುಗೊರೆ ಆಗ್ತಿದ್ದಾರೆ ಅಲ್ಪಸಂಖ್ಯಾತ ಮಹಿಳೆಯರು

ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಾ ಅಟ್ಟಹಾಸ ಮೆರೆಯುತ್ತಿರುವ ಐಎಸ್ ಉಗ್ರರಿಗೆ...
ಉಗ್ರರಿಗೆ ಉಡುಗೊರೆ ಆಗ್ತಿದ್ದಾರೆ ಅಲ್ಪಸಂಖ್ಯಾತ ಮಹಿಳೆಯರು

ಬಾಗ್ದಾದ್: ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಾ ಅಟ್ಟಹಾಸ ಮೆರೆಯುತ್ತಿರುವ ಐಎಸ್ ಉಗ್ರರಿಗೆ ಉಡುಗೊರೆ ನೀಡಲಾಗುತ್ತಿದೆ. ಆದರೆ, ಈ ಉಗ್ರರಿಗೆ ನೀಡಲಾಗುತ್ತಿರುವ ಉಡಗೊರೆ ಬಂಗಲೆ, ಬೆಲೆ ಬಾಳುವಂತಹ ವಸ್ತುಗಳು, ಅಥವಾ ಶಸ್ತ್ರಾಸ್ತ್ರಗಳು, ಖಂಡಿತವಾಗಿಯೂ ಅಲ್ಲ. ಭಯೋತ್ಪಾದಕರಿಗೆ ನೀಡಲಾಗುತ್ತಿರುವ ಉಡುಗೊರೆ ಮಹಿಳೆಯರು.

ಇರಾಕಿನಲ್ಲಿರುವ ಯಾಝಿದಿ ಅಲ್ಪಸಂಖ್ಯಾತ ಜನಾಂಗದ ಯುವತಿಯರನ್ನು ಉಡುಗೊರೆಯನ್ನಾಗಿ ಐಎಸ್ ಉಗ್ರ ಸಂಘಟನೆಗೆ ನೀಡಲಾಗುತ್ತಿದೆ ಎಂಬ ಸತ್ಯ ಬಹಿರಂಗವಾಗಿದೆ.

ಇರಾಕ್‌ನ ಉತ್ತರ ಭಾಗದಲ್ಲಿ ನೆಲಸಿದ್ದ ಯಾಝಿದಿ ಅಲ್ಪಸಂಖ್ಯಾತರ ಮೇಲೆ ಉಗ್ರರು ದಾಳಿ ನಡೆಸಿ, ಆ ಸ್ಥಳವನ್ನು ವಶಪಡಿಸಿಕೊಂಡಿದ್ದಾರೆ. ತದ ನಂತರ ಆ ಜನಾಂಗದ ಮಹಿಳೆಯರನ್ನು ಜೀತದಾಳಾಗಿ ಇಟ್ಟುಕೊಳ್ಳಲು ಯುವತಿಯರನ್ನು ಉಡುಗೊರೆಯನ್ನಾಗಿ ನೀಡಿ ಎಂದು ಯಾಝಿದಿ ಜನಾಂಗಕ್ಕೆ ಉಗ್ರರು ಬೆದರಿಕೆ ಹಾಕಿದ್ದಾರೆ.

ಈ ಹಿನ್ನಲೆಯಲ್ಲಿ ಆ ಜನಾಂಗದ ಯುವತಿಯರನ್ನು ಬಲವಂತವಾಗಿ ಉಗ್ರರಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಇದೇ ರೀತಿ ಕೆಲವು ಮಹಿಳೆಯರನ್ನು ಉಡುಗೊರೆಯನ್ನಾಗಿ ನೀಡಲಾಗಿತ್ತು.

ಇದಕ್ಕೆ ಹೆದರಿದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಎಸ್ ಉಗ್ರರ ತಂಡ, ಇರಾಕ್‌ನಲ್ಲಿರುವ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ. ಕ್ರಿಶ್ಚಿಯನ್ ಸೇರಿದಂತೆ ಅನೇಕ ಅಲ್ಪಸಂಖ್ಯಾತ ಜನಾಂಗದ ಹೆಣ್ಣುಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಜೀತಾದಾಳಗಿಟ್ಟುಕೊಂಡಿದೆ ಎಂದು ಅಂತರಾಷ್ಟ್ರೀಯ ವಾಚ್‌ಡಾಗ್ ಗ್ರೂಪ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com