

ನವದೆಹಲಿ: ಅನಿವಾಸಿ ಭಾರತೀಯರಿಗೆ ಸದ್ಯದಲ್ಲಿಯೇ ಮತದಾನದ ಹಕ್ಕು ಲಭ್ಯವಾಗಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಪಪಡಿಸಿದ್ದಾರೆ.
ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸದ್ಯದಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅವರು ಭರವಸೆ ವ್ಯಕ್ತಪಡಿಸಿದರು.
2010ರಲ್ಲಿ ಜನಪ್ರತಿನಿಧಿ, ಕಾಯ್ದೆಗೆ ತಿದ್ದುಪಡಿ ತಂದು ಅನಿವಾಸಿ ಭಾರತೀಯರಿಗೂ ಕೂಡ ಮತದಾನದ ಹಕ್ಕು ನೀಡಲು ಮುಂದಾಗಿತ್ತು.
ಇದು ಜಾರಿಗೆ ಬಂದರೆ ವಿಶ್ವದಾದ್ಯಂತ ಇರುವ 11 ಮಿಲಿಯನ್ ಮತದಾರರು ಮತ ಚಲಾವಣೆ ಮಾಡುವ ಹಕ್ಕು ಪಡೆಯಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದರು.
Advertisement