ಬೋಡೋ ಉಗ್ರ ವಿರುದ್ಧ ಕಠಿಣ ಕ್ರಮ: ರಾಜನಾಥ್ ಸಿಂಗ್

ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ನಿನ್ನೆ ಅಸ್ಸಾಂನಲ್ಲಿ ಸರಣಿ ದಾಳಿ ನಡೆಸಿ 62 ಮಂದಿಯ ಹತ್ಯೆ ಮಾಡಿದ್ದ ಬೋಡೋಲ್ಯಾಂಡ್ ಉಗ್ರರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜನಾಥ್ ಸಿಂಗ್, ಸರಣಿ ದಾಳಿ ನಡೆಸಿ ಅಮಾಯಕರ ಜೀವ ತೆಗೆದಿದ್ದ ಉಗ್ರರನ್ನು ದಮನ ಮಾಡುತ್ತೇವೆ. ಇದಕ್ಕಾಗಿ 50 ಸಿಆರ್‌ಪಿಎಫ್ ತುಕಡಿಯನ್ನು ಅಸ್ಸಾಂಗೆ ರವಾನಿಸಲಾಗಿದೆ ಎಂದರು.

ಅಸ್ಸಾಂನ ಸೋನಿತ್‌ಪುರ ಮತ್ತು ಕೊಕ್ರಜಾರ್ ಜಿಲ್ಲೆಗಳ 4 ಪ್ರದೇಶಗಳಲ್ಲಿ ಬೋಡೋ ಉಗ್ರರು ಸರಣಿ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಗಲಭೆ ಪೀಡಿತ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದರು.

ಇದೇ ವೇಳೆ, ಅಸ್ಸಾಂನಲ್ಲಿ ರಕ್ತದೋಕುಳಿ ಹರಸಿದ್ದ ನ್ಯಾಷನಲ್ ಡೆಮಾಕ್ರಟಿಕ್ ಫ್ರೆಂಟ್ ಆಫ್ ಬೋಡೋಲ್ಯಾಂಡ್‌ನ ನಾಲ್ವರು ಉಗ್ರರರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಬೋಡೋ ಉಗ್ರರು ಮತ್ತೆ ರಕ್ತದೋಕುಳಿ ಹರಸಿದ್ದಾರೆ. ಸೋನಿತ್‌ಪುರ ಮತ್ತು ಕೊಕ್ರಜಾರ್ ಜಿಲ್ಲೆಗಳ 4 ಪ್ರದೇಶಗಳಲ್ಲಿ ಮಂಗಳವಾರ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಉಗ್ರರು ಸರಣಿ ದಾಳಿ ನಡೆಸಿದ ಪರಿಣಾಮ 62 ಮಂದಿ ಸಾವಿಗೀಡಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com