ಎಕೆ-47 ಟ್ರೇಡ್‌ಮಾರ್ಕ್ ಇನ್ನು ಯಾರೂ ಬಳಸುವಂತಿಲ್ಲ

ಆಟಿಕೆಗಾಗಲಿ ಅಥವಾ ಇನ್ಯಾವುದೇ...
ಎಕೆ-47
ಎಕೆ-47

ಮಾಸ್ಕೋ: ಆಟಿಕೆಗಾಗಲಿ ಅಥವಾ ಇನ್ಯಾವುದೇ ಉತ್ಪನ್ನಗಳಿಗಾಗಲಿ ಎಕೆ-47 ಟ್ರೇಡ್‌ಮಾರ್ಕ್ ಇಟ್ಟುಕೊಳ್ಳುವ ಮೊದಲು ಯೋಚಿಸಿ!

ಯಾಕೆಂದರೆ ರಷ್ಯಾದ ಪ್ರಮುಖ ಶಸ್ತ್ರಾಸ್ತ್ರ ನಿರ್ಮಾಣ ಕಂಪನಿ ಕಲಾ ಶ್ನಿಕೋವ್ 'ಎಕೆ-47' ಅನ್ನು ಅಂತಾರಾಷ್ಟ್ರೀಯ ಟ್ರೇಡ್ ಮಾರ್ಕ್ ಆಗಿ ಪರಿಗಣಿಸುವಂತೆ ಅಂತಾರಾಷ್ಟ್ರೀಯ ಬೌದ್ಧಿಕ ಹಕ್ಕುಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. 'ಕಿಲ್ಲಿಂಗ್ ಮಿಷಿನ್‌' ಎಂದೇ ಹೆಸರು ಪಡೆದಿರುವ ಎಕೆ-47 ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ರೈಪಲ್. ಈ ಹಿನ್ನೆಲೆಯಲ್ಲಿ     'ಎಕೆ-47' ಹೆಸರಿನಲ್ಲಿ ಅನೇಕ ಕಂಪನಿಗಳು ಆಟಿಕೆಗಳು, ಜಿಮ್ನಾಸ್ಟಿಕ್, ಕ್ರೀಡಾ ಮತ್ತಿತರ ಸಾಮಗ್ರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಬೌದ್ಧಿಕ ಹಕ್ಕುಗಳ ಸಂಸ್ಥೆ ಇದಕ್ಕೇನಾದರೂ ಅನುಮತಿ ನೀಡದರೆ 'ಎಕೆ-47' ಈಗ ಕಲಾಶ್ನಿಕೋವ್‌ನ ಅಧಿಕೃತ ಟ್ರೇಡ್‌ಮಾರ್ಕ್ ಆಗಲಿದೆ. ಈ ನಡುವೆ, ಎಕೆ-47 ಮಾರ್ಕಿಂಗ್‌ಗೆ ಸಂಬಂಧಿಸಿ ಕಾನೂನು ರಕ್ಷಣೆ ನೀಡಬೇಕೆನ್ನುವ ಕಲಾಶ್ನಿಕೋವ್ ಅರ್ಜಿಯನ್ನು ಮಾತ್ರ ಬೌದ್ಧಿಕ ಹಕ್ಕುಗಳ ನ್ಯಾಯಾಲಯ ತಳ್ಳಿಹಾಕಿದೆ. ಎಕೆ-47 ಕಂಡು ಹಿಡಿದಿದ್ದ ಮಿಖೈಲ್ ಕಲಾಶ್ನಿಕೋವ್‌ನ ಸಂಬಂಧಿಕರ ಎಂಟಿ ಕಲಾಶ್ನಿಕೋವ್ ಕಂಪನಿಯು ಎಕೆ-47 ಮಾರ್ಕಿಂಗ್ ಅನ್ನು ಬಳಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com