ಮಲಯಾಳಂನ ಹಿರಿಯ ಚಿತ್ರನಟ ಎನ್.ಎಲ್ ಬಾಲಕೃಷ್ಣನ್
ದೇಶ
ಮಲಯಾಳಂ ನಟ ಎನ್ ಎಲ್ ಬಾಲಕೃಷ್ಣನ್ ನಿಧನ
ಮಲಯಾಳಂನ ಹಿರಿಯ ಚಿತ್ರನಟ ಮತ್ತು ಸ್ಟಿಲ್ ಫೋಟೋಗ್ರಾಫರ್ ಎನ್.ಎಲ್ ಬಾಲಕೃಷ್ಣನ್...
ತಿರುವನಂತಪುರಂ: ಮಲಯಾಳಂನ ಹಿರಿಯ ಚಿತ್ರನಟ ಮತ್ತು ಸ್ಟಿಲ್ ಫೋಟೋಗ್ರಾಫರ್ ಎನ್.ಎಲ್ ಬಾಲಕೃಷ್ಣನ್ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕೃಷ್ಣನ್(72) ಅವರು ತಿರುವನಂತಪುರದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಸದ್ಯಸರೊಬ್ಬರು ತಿಳಿಸಿದ್ದಾರೆ.
ಚಿತ್ರಕಲೆಯಲ್ಲಿ ಡಿಪ್ಲೋಮೋ ಪಡೆದಿದ್ದ ಬಾಲಕೃಷ್ಣನ್ ಅವರು ಸ್ಟಿಲ್ ಫೋಟೋಗ್ರಾಫರ್ ಆಗಿದ್ದರು. ತದ ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಹಾಸ್ಯ ನಟ ಹಾಗೂ ಪೋಷಕ ಪಾತ್ರದಲ್ಲಿ ಮಿಂಚಿದ್ದರು. 150 ಚಿತ್ರಗಳಿಗೆ ಸ್ಟಿಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದು, ಸುಮಾರು 100 ಚಿತ್ರಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ