
ಮುಜಾಫರ್‌ನಗರ: ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿದಂತೆಯೇ ಆಗ್ರಾದ ತಾಜ್‌ಮಹಲ್ ಅನ್ನು ಧ್ವಂಸಗೊಳಿಸಲು ಬಿಜೆಪಿ ಸಂಚು ರೂಪಿಸಿದೆ.
ಇದು ಉತ್ತರಪ್ರದೇಶದ ಸಚಿವ ಅಜಂ ಖಾನ್ ಅವರ ವಿವಾದದ ಹೊಸ ವರಸೆ. ಇತ್ತೀಚೆಗಷ್ಟೇ ತಾಜ್‌ಮಹಲ್ ಅನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಅಜಂ ಖಾನ್ ಈಗ ಪ್ರೇಮಸೌಧವನ್ನು ಒಡೆಯಲು ಬಿಜೆಪಿ ಯೋಜನೆ ಹಾಕಿಕೊಂಡಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಯಾವುದೇ ಅಭಿವೃದ್ಧಿಕಾರ್ಯ ಮಾಡುತ್ತಿಲ್ಲ. ಬಿಜೆಪಿಯು ಅಪಾಯಕಾರಿ ಆಟ ಆಡುತ್ತಿದೆ. ಬಾಬರಿ ಮಸೀದಿ ಒಡೆದಂತೆ ತಾಜ್‌ಮಹಲ್ ಅನ್ನು ಒಡೆಯಲು ಸಂಚು ರೂಪಿಸುತ್ತಿದೆ. ಕೋಮುಗಳ ನಡುವೆ ಕಂದಕ ಸೃಷ್ಟಿಸಿ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ ಖಾನ್. ಇದೇ ವೇಳೆ ಮತಾಂತರ ವಿಚಾರ ಪ್ರಸ್ತಾಪಿಸಿದ ಅವರು, ಮೊಘಲರು, ಬ್ರಿಟಿಷರು ಕೂಡ ಮತಾಂತರಕ್ಕೆ ಯತ್ನಿಸಿ ವಿಫಲರಾಗಿದ್ದರು. ಜನರ ಧರ್ಮವನ್ನು ಬದಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Advertisement