ಲಖ್ವಿಗೆ ಜಾಮೀನು ನೀಡಲು ಕಾನೂನು ಲೋಪದೋಷ ಕಾರಣ: ಪಾಕ್ ಕೋರ್ಟ್

ಮುಂಬೈ ದಾಳಿ ಸೂತ್ರಧಾರ, ಲಷ್ಕರ್-ಎ-ತೋಯ್ಬಾ ಮುಖ್ಯ ಕಮಾಂಡರ್ ಝಕಿ-ಉರ್ ರೆಹಮಾನ್ ಲಖ್ವಿಗೆ ಜಾಮೀನು..
ಝಕಿ-ಉರ್ ರೆಹಮಾನ್ ಲಖ್ವಿ
ಝಕಿ-ಉರ್ ರೆಹಮಾನ್ ಲಖ್ವಿ

ಇಸ್ಲಾಮಾಬಾದ್: ಮುಂಬೈ ದಾಳಿ ಸೂತ್ರಧಾರ, ಲಷ್ಕರ್-ಎ-ತೋಯ್ಬಾ ಮುಖ್ಯ ಕಮಾಂಡರ್ ಝಕಿ-ಉರ್ ರೆಹಮಾನ್ ಲಖ್ವಿಗೆ ಜಾಮೀನು ನೀಡಲು ಕಾನೂನಿನ ಲೋಪದೋಷಗಳೇ ಕಾರಣ ಎಂದು ಪಾಕಿಸ್ತಾನ ಉಗ್ರ ನಿಗ್ರಹ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಬಲ ಸಾಕ್ಷ್ಯಾಧಾರಗಳ ಕೊರತೆ ಹಾಗೂ ಎಫ್‌ಐಆರ್‌ನಲ್ಲಿ ಅಪ್ರಸ್ತುತ ಸೆಕ್ಸೆನ್‌ಗಳನ್ನು ದಾಖಲಿಸಿರುವುದು ಆರೋಪಿ ಲಖ್ವಿಗೆ ಜಾಮೀನು ನೀಡಲು ಪ್ರಮುಖ ಕಾರಣವಾಯಿತು. ಅಲ್ಲದೆ ಸಾಕ್ಷ್ಯಾಧಾರಗಳು ಆರೋಪಿಯ ಪರವಾಗಿವೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿರುವುದಾಗಿ ಶನಿವಾರ ಡಾನ್ ವರದಿ ಮಾಡಿದೆ.

ಮುಂಬೈ ದಾಳಿ ಪ್ರಕರಣದಲ್ಲಿ 2009ರಿಂದ ಜೈಲಿನಲ್ಲಿರುವ ಲಖ್ವಿಗೆ ಸಾಕ್ಷ್ಯಾಧಾರಗಳ ಕೊರೆತೆ ಆಧಾರದ ಮೇಲೆ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಜಾಮೀನು ನೀಡಿತ್ತು. ಅದರಂತೆ ರಾವಲ್ಪಿಂಡಿಯ ಅಧಿಯಾಲ ಜೈಲಿನಿಂದ ಲಖ್ವಿ ಶುಕ್ರವಾರಿ ಬಿಡುಗಡೆಯಾಗಬೇಕಿತ್ತು. ಆದರೆ, ಇದರ ವಿರುದ್ಧ ಭಾರತ ಮಾತ್ರವಲ್ಲದೆ ಪಾಕ್‌ನೊಳಗೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಲಖ್ವಿಯನ್ನು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು (ಎಂಪಿಒ) ಸರ್ಕಾರ ವಶಕ್ಕೆ ತೆಗೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com