ಅವಿವಾಹಿತ ಮಗಳಿಗೆ ನಿರ್ವಹಣೆ ವೆಚ್ಚ ನೀಡಿ: ಹೈಕೋರ್ಟ್

ಅವಿವಾಹಿತ ಮಗಳ ನಿರ್ವಹಣಾ ವೆಚ್ಚವನ್ನು ತಂದೆಯೇ ಭರಿಸಬೇಕು ಎಂದು...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಅವಿವಾಹಿತ ಮಗಳ ನಿರ್ವಹಣಾ ವೆಚ್ಚವನ್ನು ತಂದೆಯೇ ಭರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

28 ವರ್ಷದ ಯುವತಿಯೊಬ್ಬಳು ತಂದೆಯಿಂದ ನಿರ್ವಹಣ ವೆಚ್ಚ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ನ್ಯಾಯಾಲಯ ಅವಿವಾಹಿತ ಮಗಳಿಗೆ ಆಕೆಗೆ ನಿರ್ವಹಣಾ ವೆಚ್ಚ ನೀಡುವಂತೆ ಆಗ್ರಹಿಸಿದೆ.

ನ್ಯಾಯಾಮೂರ್ತಿ ಕೆ.ಎನ್ ಫನೀಂದ್ರ ಅವರು, ಹಿಂದೂ, ಮುಸ್ಲೀಂ, ಮೊಹಮ್ಮದನ್, ಪಾರ್ಸಿ ಅಥವಾ ಕ್ರೈಸ್ತ ಧರ್ಮ ಸೇರಿದಂತೆ ಯಾವುದೇ ಧರ್ಮದವರಾಗಿರಲಿ, ಇನ್ನು ಮುಂದೆ ತಂದೆಯಂದಿರು ತಮ್ಮ ಅವಿವಾಹಿತ ಹೆಣ್ಣುಮಕ್ಕಳ ನಿರ್ವಹಣಾ ವೆಚ್ಚವನ್ನು ಭರಿಸಬೇಕು. ಹೆಣ್ಣುಮಕ್ಕಳು ವಿವಾಹವಾಗುವವರೆಗೆ ಅವರ ವೆಚ್ಚವನ್ನು ತಂದೆಯಂದಿರೇ ಬರಿಸಬೇಕಿದೆ ಎಂದು ಆದೇಶಿಸಿದ್ದಾರೆ.

ಮೆಹರುನ್ನೀಸ ಎಂಬ ಯುವತಿ ತನ್ನ ತಂದೆ ತಿಂಗಳಿಗೆ 3,000 ಸಾವಿರ ನಿರ್ವಹಣಾ ವೆಚ್ಚ ನೀಡಬೇಕು ಎಂದು ಕೋರಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಳು. ಆಕೆಯ ತಂದೆ ಕರ್ನಾಟಕ ಪೊಲೀಸ್ ಮೀಸಲು ಪಡೆಯ ಅಧಿಕಾರಿ ಸೈಯದ್ ಹಬೀಬ್. ತನ್ನ ಮದುವೆ ಆಗುವವರೆಗೆ ತನ್ನ ತಂದೆ ನಿರ್ವಹಣಾ ವೆಚ್ಚ ನೀಡಬೇಕು ಎಂದು ಮನವಿ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆ ಮದುವೆಯಾಗುವರೆಗೆ ಜೀವನಾಂಶ ನೀಡಬೇಕು ಎಂದು ಅಧಿಕಾರಿ ತಂದೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹಬೀಬ್ ಅವರು ತುಮಕೂರು ತ್ವರಿತ ವಿಚಾರಣೆ ಕೋರ್ಟ್ ಮೆಟ್ಟಿಲೇರಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಆದೇಶವನ್ನು ತ್ವರಿತ ವಿಚಾರಣೆ ಕೋರ್ಟ್ ರದ್ದುಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನಾನು ಅಸಹಾಯಕ ಮಹಿಳೆಯಾಗಿದ್ದು, ನನ್ನ ನಿರ್ವಹಣೆಗೆ ಕಷ್ಟವಾಗಿದೆ. ನನ್ನ ತಂದೆ ಸರ್ಕಾರಿ ಉದ್ಯೋಗರಸ್ಥರಾಗಿದ್ದು, ಅವರು ನನ್ನ ನಿರ್ವಹಣಾ ವೆಚ್ಚಗಳನ್ನು ಬರಿಸುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಳು.

ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಇನ್ನು ಮುಂದೆ ತಂದೆಯಂದಿರು ತಮ್ಮ ಅವಿವಾಹಿತ ಹೆಣ್ಣುಮಕ್ಕಳು ವಿವಾಹವಾಗುವವರೆಗೆ ಅವರ ನಿರ್ವಹಣಾ ವೆಚ್ಚವನ್ನು ತಂದೆಯಂದಿರೇ ಬರಿಸಬೇಕಿದೆ ಎಂದು ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com