ಹಂದಿ ಜ್ವರ ಆಂತಕ ಬೇಡ: ಆರೋಗ್ಯ ಸಚಿವ ಜೆ.ಪಿ ನಡ್ಡಾ

ಜೆ.ಪಿ ನಡ್ಡಾ
ಜೆ.ಪಿ ನಡ್ಡಾ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಂದಿ ಜ್ವರದಿಂದ ಮಹಿಳೆಯೋರ್ವರು ಮೃತಪಟ್ಟಿರುವುದು ವರದಿಯಾಗಿದ್ದು ಇದೀಗ ದೆಹಲಿಯಲ್ಲಿ ಹಂದಿ ಜ್ವರ ಭೀತಿ ಎದುರಾಗಿದೆ.

ಹಂದಿ ಜ್ವರ ಭೀತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರು, ದೆಹಲಿಯಲ್ಲಿನ 17 ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳು ದೊರೆಯುವುದರಿಂದ ಹಂದಿ ಜ್ವರದ ಬಗ್ಗೆ ದೆಹಲಿ ಜನತೆ ಆಂತಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಜನತೆ ಹಂದಿ ಜ್ವರ ರೋಗದ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬಹುದು ಎಂದರು.

ಉತ್ತರಪ್ರದೇಶದ ಘಜಿಯಾಬಾದ್ ಆಸ್ಪತ್ರೆಯಲ್ಲಿ ಮಾರಣಾಂತಿಕ ರೋಗ್ಯದಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಯೋರ್ವರನ್ನು ಡಿಸೆಂಬರ್ 21ರಂದು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆಯ ಕಳೆದ ಎರಡು ದಿನಗಳಿಂದ ಹಿಂದೆ ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ಅಧಿಕಾರಿಗಲು ತಿಳಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ದೇಶಾದ್ಯಂತ ಹಂದಿ ಜ್ವರದಿಂದಾಗಿ 40 ಮಂದಿ ಮೃತಪಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಮೂವರು ಮೃತಪಟ್ಟಿದ್ದು 12ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಪುಣೆ ಮತ್ತು ಇಂದೋರ್‌ನಲ್ಲೂ ಪ್ರಕರಣಗಳು ವರದಿಯಾಗಿವೆ.

ಚಳಿಗಾಳದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಂದಿ ಜ್ವರ ಗಂಟಲು ಸಮಸ್ಯೆಗಳಿಂದ ಶೂರುವಾಗುತ್ತದೆ. ಬಳಿಕ ಮೈ ಕೆರೆತ ಸುರುವಾಗುತ್ತದೆ. ಇದರಿಂದಾಗಿ ಜನತೆ ಹಂದಿ ಜ್ವರದಿಂದ ತಪ್ಪಿಸಿಕೊಳ್ಳಲು ಸುಚಿತ್ವವನ್ನು ಅಳವಡಿಸಿಕೊಳ್ಳಬೇಕು ಎಂಬ ಸಲಹೆಗಳನ್ನು ಆರೋಗ್ಯ ಇಲಾಖೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com