ಈಗ ಭೂಸ್ವಾಧೀನಕ್ಕೂ ಸುಗ್ರೀವಾಜ್ಞೆ!

ಕೆಲವೊಂದು ಬದಲಾವಣೆ ತರುವ ನಿಟ್ಟಿನಲ್ಲಿ ಅದಕ್ಕೂ ಸುಗ್ರೀವಾಜ್ಞೆ ಮೊರೆ ಹೋಗಲು ಸರ್ಕಾರ ನಿರ್ಧರಿಸಿದೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಆರ್ಥಿಕ ಸುಧಾರಣೆಯ ಆರ್ಥಿಕ ಸುಧಾರಣೆಯ ಆಶ್ವಾಸನೆ ನೀಡುತ್ತಾ ಅಧಿಕಾರಕ್ಕೆ ಬಂದಿರುವ ಕೇಂದ್ರದ ಮೋದಿ ಸರ್ಕಾರ ಈಗ ತಮ್ಮ ಆಶ್ವಾಸನೆಗಳನ್ನು ಈಡೇರಿಸುವ ಸಲುವಾಗಿ 'ಸುಗ್ರೀವನ' ಹಾದಿಯನ್ನೇ ಮುಂದುವರಿಸಿದೆ.

ಸಂಸತ್ ಸದಸ್ಯರ ಗದ್ದಲ, ಕೋಲಾಹಲಗಳಿಂದಾಗಿ ಚಳಿಗಾಲದ ಅಧಿವೇಶನವು ವಾಷ್ಔಟ್ ಆಗಿರುವ ಕಾರಣ, ಸರ್ಕಾರವು ವಿಮೆ, ಕಲ್ಲಿದ್ದಲು ಹಾಗೂ ಫಾರ್ಮಾ ಕ್ಷೇತ್ರಗಳಇಗೆ ಸಂಬಂಧಿಸಿದ ವಿಧೇಯಕಗಳನ್ನು ಸುಗ್ರೀವಾಜ್ಞೆ ಮೂಲಕ ಅಂಗೀಕಾರ ಪಡೆದದ್ದಾಯಿತು. ಈಗ ಸರ್ಕಾರದ ಮುಂದಿನ ಗುರಿ ಭೂಸ್ವಾಧೀನ ಕಾಯ್ದೆ.

ಭೂಸ್ವಾಧೀನ ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆ ತರುವ ನಿಟ್ಟಿನಲ್ಲಿ ಅದಕ್ಕೂ ಸುಗ್ರೀವಾಜ್ಞೆ ಮೊರೆ ಹೋಗಲು ಸರ್ಕಾರ ನಿರ್ಧರಿಸಿದೆ. ಕೂಡಲೇ ಕಾಯ್ದೆಗೆ ಸಂಬಂಧಿಸಿದ ಕರಡು ಸುಗ್ರೀವಾಜ್ಞೆಯನ್ನು ಸಿದ್ಧಪಡಿಸುವಂತೆ ಸರ್ಕಾರ ಈಗಾಗಲೇ ಗ್ರಾಮೀಣಾಭಿವೃದ್ದಿ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಭೂಸ್ವಾಧೀನ, ಪುನರ್ವಸತಿ ಮತ್ತು ಪುನಃಸ್ಥಾಪಿಸಿ ಕಾಯ್ದೆ, 2013ರ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕಿನಲ್ಲಿ ಬದಲಾವಣೆ ತರುವ ವಿಚಾರದಲ್ಲಿ ಸಂಪುಟದ ಒಪ್ಪಿಗೆಯನ್ನು ಮುಂದಿನ ವಾರ ಪಡೆಯಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದೇ ವೇಳೆ, ಅಗತ್ಯ ಬಿದ್ದರೆ ಎರಡೂ ಸದನಗಳ ಜಂಟಿ ಅಧಿವೇಶನ ಕರೆಯಲಾಗುವುದು ಎಂದೂ ಹೇಳಲಾಗಿದೆ.

ಕಾಯ್ದೆ ಜಾರಿಗೆ ಬಂದಿದ್ದು ಯಾವಾಗ?
ಭೂಸ್ವಾಧೀನ ಕಾಯ್ದೆ 2014ರ ಜನವರಿ 1ರಂದು ಜಾರಿಗೆ ಬಂತು.

ಸರ್ಕಾರದ ನಿರ್ಧಾರಕ್ಕೆ ಕಾರಣವೇನು?
ಇತ್ತೀಚೆಗೆ ನಡೆದ ಜಾರ್ಖಡ್ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿರುವುದು ಪಕ್ಷದ ಹುಮ್ಮಸ್ಸನ್ನು ಹೆಚ್ಚಿಸಿದೆ. ಒಳ್ಳೆಯ ದಿನಗಳನ್ನು ತೋರಿಸುತ್ತೇನೆ ಎಂದು ಪ್ರಧಾನಿ ಮೋದಿ ಮತದಾರರಿಗೆ ಭರವಸೆ ನೀಡಿದ್ದಾರೆ.

ಸುಗ್ರೀವಾಜ್ಞೆಗೆ ತರಾತುರಿ ಏಕೆ?
ಕಾಯ್ದೆಯು ಜ.1 2014ರಂದು ಜಾರಿಗೆ ಬಂದಿದ್ದು, 2015ರ ಜ.1ರೊಳಗೆ ಸುಗ್ರೀವಾಜ್ಞೆ ಜಾರಿ ಮಾಡದಿದ್ದರೆ, ಮೇಲೆ ಹೇಳಿದ 13 ಕಾನೂನುಗಳು ಭೂಸ್ವಾಧೀನ ಕಾಯ್ದೆಯ ವ್ಯಾಪ್ತಿಯೊಳಕ್ಕೆ ಬರುತ್ತದೆ. ಇದು ಸರ್ಕಾರಕ್ಕೆ ಇಷ್ಟವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com