ಪಿಕೆ ಚಿತ್ರದ ಯಾವುದೇ ದೃಶ್ಯಗಳಿಗೆ ಕತ್ತರಿ ಇಲ್ಲ

ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ...
ಅಮಿರ್‌ಖಾನ್ ನಟನೆಯ 'ಪಿಕೆ'
ಅಮಿರ್‌ಖಾನ್ ನಟನೆಯ 'ಪಿಕೆ'

ನವದೆಹಲಿ: ಇತ್ತೀಚೆಗಷ್ಟೆ ಬಿಡುಗಡೆಗೊಂಡು ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗಿರುವ ಅಮಿರ್‌ಖಾನ್ ನಟನೆಯ ಪಿಕೆ ಚಿತ್ರದದಲ್ಲಿ ಹಿಂದೂ ದೇವತೆಗಳನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರೀಸಲಾಗಿದೆ ಎಂದು ವಿಶ್ವಹಿಂದೂ ಪರಿಷತ್ ಸೇರಿದಂತೆ, ಅನೇಕ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಪಿಕೆ ಚಿತ್ರದಲ್ಲಿರುವ ಹಿಂದೂ ದೇವತೆಗಳಿನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರೀಕರಿಸಿರುವ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ, ಬಜರಂಗ ದಳದ ಕಾರ್ಯಕರ್ತರು ಇಂದು, ಅಹಮದಾಬಾದ್‌ನಲ್ಲಿರುವ ಚಿತ್ರಮಂದಿರವೊಂದಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಪಿಕೆ ಚಿತ್ರ ಪ್ರದರ್ಶನ ನಡೆಯುತ್ತಿರುವ ಚಿತ್ರಮಂದಿರದ ಕಿಟಕಿ ಗಾಜು, ಪ್ರದರ್ಶನ ಫಲಕಗಳ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.

ಇನ್ನೂ ದೇಶದ ಹಲವಡೆ ಪ್ರತಿಭಟನೆ ನಡೆಸುತ್ತಿರುವ ಕೆಲ ಹಿಂದೂಪರ ಸಂಘಟನೆಗಳು ಪಿಕೆ ಚಿತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಲೀಲಾ ಸಾಮ್ಸನ್, ಪಿಕೆ ಚಿತ್ರದಲ್ಲಿನ ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶವಿಲ್ಲ ಎಂದು ಅವರು ವಿವರಿಸಿದ್ದಾರೆ.

ಪಿಕೆ ಚಿತ್ರದಲ್ಲಿ ಹಿಂದೂ ಧಾರ್ಮಿಕತೆಯನ್ನು ಕ್ರಿಯಾತ್ಮಕವಾಗಿ ಚಿತ್ರೀಕರಿಸಲಾಗಿದೆಯೇ ಹೊರತು ಧಾರ್ಮಿಕ ಭಾವನೆಗಳನ್ನು ಕೆರಳಿಸುಂತೆ ಚಿತ್ರೀಕರಿಸಿಲ್ಲ. ಪಿಕೆ ಚಿತ್ರಕ್ಕೆ ಈಗಾಗಲೇ ಕೇಂದ್ರ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ. ಆದ್ದರಿಂದ ಪಿಕೆ ಚಿತ್ರದಲ್ಲಿನ ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಲೀಲಾ ಸ್ಪಷ್ಪಪಡಿಸಿದ್ದಾರೆ.

ಅಮೀರ್‌ಖಾನ್‌ನ ಬಹುನಿರೀಕ್ಷಿತ ಚಿತ್ರವಾಗಿದ್ದ ಪಿಕೆ, ಕಳೆದ ಡಿ.19 ರಂದು ವಿಶ್ವಾದ್ಯಂತ ಬಿಡುಗಡೆಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com