
ಕೊಲಂಬೊ: ಶ್ರೀಲಂಕಾ ಅಧ್ಯಕ್ಷರ ಸ್ಥಾನಕ್ಕೆ ಜ.8 ರಂದು ಚುನಾವಣೆ ನಡೆಯಲಿದೆ. ಶ್ರೀಲಂಕಾದಲ್ಲಿ ಪ್ರಸ್ತುತ ಅಧ್ಯಕ್ಷರಾಗಿರುವ ಮಹೀಂದಾ ರಾಜಪಕ್ಷೆ, ಮತ್ತೆ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದಾರೆ. ವಿಪಕ್ಷನಾಯಕ ಬಾಲ ಸಿರಿಸೇನ ಪ್ರತಿಸ್ಪರ್ಧಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.
ಅಧ್ಯಕ್ಷೀಯ ಗಾಧಿಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ, ಮಹೀಂದಾ ರಾಜಪಕ್ಷೆ ಗೆಲ್ಲುವ ತವಕದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಯೂಟ್ಯೂಬ್, ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಚುನವಾಣಾ ಪ್ರಚಾರ ಕೈಗೊಂಡಿದ್ದಾರೆ.
ಇದು ಮಾತ್ರವಲ್ಲದೆ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ರಂಗು ತುಂಬಿಸಲು, ಬಾಲಿವುಡ್ ನಟ ಸಲ್ಮಾನ್‌ಖಾನ್‌ನನ್ನು ಆಹ್ವಾನಿಸಿದ್ದಾರೆ ಮಹೀಂದಾ ರಾಜಪಕ್ಷೆ. ಶ್ರೀಲಂಕಾ ರಾಜಧಾನಿ ಕೊಲಂಬೊಗೆ ಆಗಮಿಸಿದ್ದ ಸಲ್ಮಾನ್‌ಖಾನ್, ಮಹೀಂದಾ ರಾಜಪಕ್ಷೆ ಪರ ಚುನಾವಣಾ ಪ್ರಚಾರ ಕೈಗೊಂಡರು. ಬಾಲಿವುಡ್ ನಟಿ ಜಾಕ್ವಿಲಿನ್ ಫರ್ನಾಂಡೀಸ್ ಸಹ ಸಲ್ಮಾಖಾನ್‌ಗೆ ಸಾಥ್ ನೀಡಿದರು.
ಮಹೀಂದಾ ರಾಜಪಕ್ಷೆ ಮಗನಾದ ನಮಲ್ ಮತ್ತು ಸಲ್ಮಾನ್‌ಖಾನ್ ಇವರಿಬ್ಬರಿಬ್ಬರ ಮಧ್ಯೆ ಹಲವು ವರ್ಷಗಳಿಂದ ಸ್ನೇಹವಿತ್ತು. ಬಾಲಿವುಡ್ ನಟಿ ಜಾಕ್ವಿಲಿನ್ ಫರ್ನಾಂಡೀಸ್ ಮೂಲತಃ ಶ್ರೀಲಂಕಾದವರು. ಈ ಹಿನ್ನೆಲೆಯಲ್ಲಿ ರಾಜಪಕ್ಷೆ ತಮ್ಮ ಚುನಾವಣಾ ಪ್ರಚಾರಕ್ಕೆ ರಂಗುತುಂಬಿಸುವ ಪ್ರಯತ್ನ ಕೈಗೊಂಡಿದ್ದಾರೆ.
Advertisement