ಎಬೊಲಾ ಸೋಂಕು ಹುಟ್ಟಿನ ಹಿಂದಿನ ಕಥೆಯೇನು ಗೊತ್ತಾ?

ಎಬೊಲಾ ಎಂಬ ಮಾರಣಾಂತಿಕ ರೋಗ...
ಬಾವಲಿ
ಬಾವಲಿ

ಕೊನಾಕ್ರಿ: ಎಬೊಲಾ ಎಂಬ ಮಾರಣಾಂತಿಕ ರೋಗ ಬಂದಿದ್ದು ಬಾವಲಿಯಿಂದ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಮೊತ್ತಮೊದಲ ಬಾರಿಗೆ ಎಬೊಲಾ ಕಾಯಿಲೆಗೆ ತುತ್ತಾದವರು ಯಾರು? ಅವರಿಗೆ ಸೋಂಕು ತಗುಲಿದ್ದಾದರೂ ಹೇಗೆ ಎಂಬುದು ಯಾರಿಗಾದರೂ ಗೊತ್ತಿದೆಯೇ? ಆ ಕಥೆ ಹೀಗಿದೆ ನೋಡಿ.

ಗಿನಿಯಾದ ಮಿಲಿಯಾಂಡೋ ಎಂಬ ಹಳ್ಳಿಯಲ್ಲಿ 2 ವರ್ಷದ ಬಾಲಕ ಎಮಿಲೆ ಕ್ವಮಾನೋ ತನ್ನ ಸ್ನೇಹಿತರ ಜತೆಗೂಡಿ ಟೊಳ್ಳು ಮರವೊಂದರ ಬಳಿ ಆಡಲು ತೆರಳುತ್ತಿದ್ದ. ಅಲ್ಲಿಗೆ ಬರುತ್ತಿದ್ದ ಬಾವಲಿಗಳೊಂದಿಗೂ ಆ ಮಕ್ಕಳು ಆಡುತ್ತಿದ್ದರು. ಒಮ್ಮೊಮ್ಮೆ ಬಾವಲಿಗಳನ್ನು ಬೇಟೆಯಾಡುತ್ತಿದ್ದರು. ಅವುಗಳ ಪೈಕಿ ಎಬೊಲಾ ಸೋಂಕನ್ನು ಹರಡುವ ಬಾವಲಿಯೂ ಇತ್ತು. ಹೀಗಾಗಿ ಮೊದಲು ಎಮಿಲೆಗೆ ಎಬೊಲಾ ಸೋಂಕು ಹರಡಿತ್ತು.

2013ರ ಡಿಸೆಂಬರ್‌ನಲ್ಲಿ ಆ ಬಾಲಕ ಎಮಿಲೆ, ನಂತರ ಆತನ ಸಹೋದರಿ ಮತ್ತು ತಾಯಿ ಎಬೊಲಾಗೆ ಬಲಿಯಾದರು. ಅವರು ಹೇಗೆ ಸತ್ತರು ಎಂಬ ವಿಚಾರ ಯಾರಿಗೂ ಗೊತ್ತಾಗಲಿಲ್ಲ. ನಂತರ ಮಾರ್ಚ್‌ನಲ್ಲಿ ಸೋಂಕು ಲೈಬೀರಿಯಾವನ್ನು ತಲುಪಿತು. ನಂತರ ನೈಜೀರಿಯಾ, ಮಾಲಿ, ಸೆನೆಗಲ್, ಸ್ಪೇನ್, ಅಮೆರಿಕ, ಬ್ರಿಟನ್‌ಗೂ ಕಾಲಿಟ್ಟಿತು.

ಜರ್ಮನಿ, ಸ್ವೀಡನ್, ಕೆನಡಾ ಹಾಗೂ ಬ್ರಿಟನ್‌ನ ಸಂಶೋಧಕರ ತಂಡವು ಗಿನಿಯಾದಲ್ಲಿ ನಡೆಸಿದ ಅಧ್ಯಯನವು ಈ ಎಲ್ಲ ವಿಚಾರವನ್ನು ಬಹಿರಂಗಪಡಿಸಿದೆ. ಎಮಿಲೆ ಕುಟುಂಬ ಇದ್ದಿದ್ದು ಗಿನಿಯಾದ ದಟ್ಟಾರಣ್ಯದ ಮಧ್ಯೆ ಇರುವ ಗ್ರಾಮದಲ್ಲಿ. ಇಲ್ಲಿ 31 ಮನೆಗಳಷ್ಟೇ ಇದ್ದವು. ಎಮಿಲೆ ಮನೆಯ ಸುತ್ತಲೂ ಇದ್ದ ಮರಗಳ ಗುಂಪಿನ ನಡುವೆ ಬಾವಲಿಗಳ ಕಾಲೊನಿಯೋ ವಾಸವಿತ್ತು ಎಂದಿದ್ದಾರೆ ತಜ್ಞರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com