'ಸಚಿವ, ಸಂಸದರು ಹೊಸವರ್ಷ ಆಚರಣೆಯಲ್ಲಿ ಪಾಲ್ಗೊಳ್ಳಬಾರದು'

200ಕ್ಕೂ ಹೆಚ್ಚು ಸಚಿವರು, ಸಂಸದರು ವಿದೇಶಿ ಪ್ರವಾಸಗಳನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಹೊಸವರ್ಷ ಸಂಭ್ರಮಾಚರಣೆಗೆ ವಿಶ್ವದಾದ್ಯಂತ ಬಿರುಸಿನ ತಯಾರಿ ನಡೆಯುತ್ತಿದೆ.

ನೂತನ ವರ್ಷವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಳ್ಳುವ ಸಲುವಾಗಿ ಹೊಸವರ್ಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕಿರಿಯರಾದಿಯಾಗಿ ಎಲ್ಲರು ಉತ್ಸಾಹಭರಿತರಾಗಿದ್ದಾರೆ. ಆದರೆ ಈ ಭಾರಿ ಹೊಸವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಚಿವರಿಗೆ ಹಾಗೂ ಸಂಸದರಿಗೆ ಬ್ರೇಕ್ ಹಾಕಿದ್ದಾರೆ.

ಸಚಿವರು ಮತ್ತು ಸಂಸದರು ಯಾವುದೇ ಕಾರಣಕ್ಕೂ ಹೊಸವರ್ಷ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬಾರದು ಎಂದು ತಿಳಿಸಿದ್ದಾರೆ. ಪ್ರತಿನಿಧಿಗಳು ಹೊಸವರ್ಷಾಚರಣೆಯಲ್ಲಿ ಪಾಲ್ಗೊಳ್ಳುವ ಬದಲು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅದುವೇ ಸಂತಸ ತರುತ್ತದೆ.

ಸಚಿವರು ಹಾಗೂ ಸಂಸದರು ಕಮರ್ಷಿಯಲ್ ಅಥವಾ ಕಾರ್ಪೋರೇಟ್ ಶೈಲಿಯಲ್ಲಿ ಹೊಸವರ್ಷ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಬದಲು ಸಾರ್ವಜನಿಕ ಕೆಲಸಗಳಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರ ಮತ್ತು ಪಕ್ಷಕ್ಕೆ ಗೌರವ ತಂದುಕೊಡಿ ಎಂದು ಕಿವಿಮಾತು ಹೇಳಿದ್ದಾರೆ.

ಈಗ 20 ಗಂಟೆ ಕೆಲಸ ಮಾಡುವ ಸಚಿವರು ತಮ್ಮನ್ನು ಮತ್ತಷ್ಟು ತೊಡಗಿಸಿ, ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಲ ಸಚಿವರು ಹೊಸವರ್ಷದ ಆಚರಣೆ ಹಾಗೂ ಪ್ರವಾಸಗಳನ್ನು ಮೊಟಕುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಹಿತಿಯ ಪ್ರಕಾರ ಸುಮಾರು 200ಕ್ಕೂ ಹೆಚ್ಚು ಮಂದಿ ಸಚಿವರು, ಸಂಸದರು ವಿದೇಶಿ ಪ್ರವಾಸಗಳನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.

ಸ್ವತಃ ಪ್ರಧಾನಿ ಮೋದಿ ಅವರೆ ಡಿಸೆಂಬರ್ 31 ಹಾಗೂ ಜ.1 ರಂದು ತಮ್ಮ ಕಚೇರಿಯಲ್ಲಿ ಎಂದಿನಂತೆ ಕೆಲಸ ನಿರ್ವಹಿಸಲಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ, ಪ್ರಧಾನಿಯ ಮನವಿ ಹಿನ್ನೆಲೆಯಲ್ಲಿ ಡಿ.31 ರಂದು ಎಲ್ಲ ಸಚಿವರು ಎಂದಿನಂತೆ ತಮ್ಮ ಕೆಲಸಗಳಲ್ಲಿ ತೊಡಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com