
ನವದೆಹಲಿ: ಪಿಕೆ ಚಿತ್ರ ಬಿಡುಗಡೆಗೂ ಮುನ್ನು ಸೆನ್ಸಾರ್ ಮಂಡಳಿಯವರು ಚಿತ್ರವನ್ನು ಪರಿಶೀಲನೆ ಮಾಡಿದ್ದು, ಪುನಃ ಚಿತ್ರದ ಕುರಿತ ಪೊಲೀಸರ ತನಿಖೆ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಅಮೀರ್ ಖಾನ್ ನಟನೆಯ ಪಿಕೆ ಚಿತ್ರ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ದಕ್ಕೆಯುಂಟು ಮಾಡುತ್ತಿದೆ ಎಂದು ಆರೋಪಿಸುತ್ತಿರುವ ಹಿಂದೂ ಪರ ಸಂಘಟನೆಗಳು ದೇಶದೆಲ್ಲೆಡೆ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ದೇವೇಂದ್ರ ಫಡ್ನವೀಸ್ ಅವರು ಚಿತ್ರವನ್ನು ಈಗಾಗಲೇ ಸೆನ್ಸಾರ್ ಮಂಡಳಿ ಪರಿಶೀಲಿಸಿದ್ದು, ಮತ್ತೆ ಈ ಕುರಿತ ಪೊಲೀಸ್ ತನಿಖೆ ಅಗತ್ಯವಿಲ್ಲ.
ಆದರೆ, ಚಿತ್ರದಲ್ಲಿ ಯಾವುದಾದರೆ ಘಟನೆಯಾಧಾರಿತ ಸನ್ನಿವೇಶಗಳೇನಾದರೂ ಇವೆಯೇ ಎಂಬುದರ ಕುರಿತು ತನಿಖೆಯಾಗಬೇಕಿದೆ. ಈ ಕಾರ್ಯವನ್ನು ಕಾನೂನು ಸುವ್ಯವಸ್ಥೆ ಮಾಡಬೇಕಿದೆ ಎಂದು ಫಡ್ನವೀಸ್ ಹೇಳಿದ್ದಾರೆ.
Advertisement