
ನವದೆಹಲಿ: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಬೇಕು ಬೇಡಗಳ ನಡುವಿನ ಜಂಜಾಟದಲ್ಲಿ ಸರ್ಕಾರದ ವಾದ ಗೆದ್ದಾಗಿದೆ. ಇನ್ನು ಮುಂದೆ ಸರ್ಕಾರ ನೇಮಿಸಿದ ಮಂಡಳಿ ನ್ಯಾಯಾಧೀಶರನ್ನು ನೇಮಕ ಮಾಡಲಿದೆ. ರಾಷ್ಟ್ರೀಯ ನ್ಯಾಯಾಂಗ ನೇಮಕ ಮಂಡಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿದ್ದಾರೆ.
ಹೊಸ ಮಾದರಿಯಲ್ಲಿ ಸುಪ್ರೀಂ ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ರಾಜಕಾರಣಿಗಳು ಮತ್ತು ತಜ್ಞರನ್ನೊಳಗೊಂಡ ಸಮಿತಿ ಆಯ್ಕೆ ಮಾಡಲಿದೆ. ಇದುವರೆಗಿನ ಕೋಲಿಜಿಯಂ ವ್ಯವಸ್ಥೆಗೆ ಹಿಂದಿನ ಯುಪಿಎ ಸರ್ಕಾರದಲ್ಲೇ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಇದನ್ನು ತೆಗೆದು ಹೊಸ ವ್ಯವಸ್ಥೆ ಮಾಡಬೇಕು ಎಂದು ಮುಂದಾಗಿತ್ತು.
ಹೇಗಿರುತ್ತೆ ಮಂಡಳಿ?: ಈ ಹೊಸ ವ್ಯವಸ್ಥೆಯಲ್ಲಿ 6 ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕಾನೂನು ಸಚಿವರು ಮತ್ತು ಇಬ್ಬರು ತಜ್ಞರು ಇರುತ್ತಾರೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಇದಕ್ಕೆ ಅಧ್ಯಕ್ಷತೆ ವಹಿಸುತ್ತಾರೆ. ಇಬ್ಬರು ತಜ್ಞರ ಪೈಕಿ ಒಬ್ಬರು ಹಿಂದುಳಿದ ಜಾತಿಗೆ ಸೇರಿದವರಾಗಿರಬೇಕು. ಇವರ ಅಧಿಕಾರವಧಿ 3 ವರ್ಷಗಳಾಗಿದ್ದು ಮತ್ತೆ ಇವರನ್ನೇ ಪುನ ನಾಮನಿರ್ದೇಶನ ಮಾಡುವಂತಿಲ್ಲ. ಕಳೆದ ಆಗಸ್ಟ್‌ನಲ್ಲಿ ಈ ಮಂಡಳಿಗೆ ಸಂಸತ್‌ನಲ್ಲಿ ಒಪ್ಪಿಗೆ ನೀಡಲಾಗಿತ್ತು. ಜತೆಗೆ 15 ರಾಜ್ಯಗಳಲ್ಲೂ ಇದಕ್ಕೆ ಒಪ್ಪಿಗೆಸಿಕ್ಕಿದೆ.
Advertisement