
ನವದೆಹಲಿ: ಸದ್ಯಕ್ಕೆ ಕೇಂದ್ರಲ್ಲಿ ಎರಡು ಪ್ರಮುಖ ಖಾತೆಗಳಾದ ಹಣಕಾಸು ಮತ್ತು ರಕ್ಷಣಾ ಖಾತೆಗಳನ್ನು ನೋಡಿಕೊಳ್ಳುತ್ತಿರುವ ಅರುಣ್ ಜೇಟ್ಲಿಯವರಿಗೆ ರಕ್ಷಣಾ ಖಾತೆಯ ಜವಾಬ್ದಾರಿಯಿಂದ ಮುಕ್ತಿ ಸಿಗಲಿದೆ ಮತ್ತು ರಕ್ಷಣಾ ಖಾತೆಗೆ ನೂತನ ಮಂತ್ರಿಯಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೆವ್ಂಬರ್ ೨೪ ರಂದು ಲೋಕಸಭೆಯ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು ಅದಕ್ಕೂ ಮುಂಚಿತವಾಗಿ ಅರುಣ್ ಜೇಟ್ಲಿ ರಕ್ಷಣಾ ಸಚಿವ ಸ್ಥಾನ ತೊರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಆರ್ ಎಸ್ ಎಸ್ ನ ಮಾಜಿ ಪ್ರಚಾರಕ ಮನೋಹರ್ ಪರಿಕ್ಕರ್ ಅವರ ಈ ಹೊಸ ಸ್ಥಾನಕ್ಕೆ ಆರ್ ಎಸ್ ಎಸ್ ಬೆಂಬಲ ಕೂಡ ಇದೆ ಎನ್ನಲಾಗಿದೆ.
Advertisement