ಹಿಟ್ ಅಂಡ್ ರನ್ ಕೇಸ್: ಸಲ್ಮಾನ್ ಕುಡಿದಿರಲಿಲ್ಲ ಎಂದ ಪ್ರತ್ಯಕ್ಷದರ್ಶಿ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ೨೦೦೨ ಹಿಟ್ ಅಂಡ್ ರನ್ ಕೇಸ ನಲ್ಲಿ, ನಾನು ದುರ್ಘಟನೆ ನಡೆದ ...
ಸಲ್ಮಾನ್ ಖಾನ್ - ಸಂಗ್ರಹ ಚಿತ್ರ
ಸಲ್ಮಾನ್ ಖಾನ್ - ಸಂಗ್ರಹ ಚಿತ್ರ

ಮುಂಬೈ: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ೨೦೦೨ ಹಿಟ್ ಅಂಡ್ ರನ್ ಕೇಸ್ ನಲ್ಲಿ, ನಾನು ದುರ್ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಅವರನ್ನು ಭೇಟಿ ಮಾಡಿದ್ದೆ, ಆಗ ಸಲ್ಮಾನ್ ಅವರಿಂದ ಮದ್ಯದ ವಾಸನೆ ಬರುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸೆಪ್ಟಂಬರ್ ೨೮ ೨೦೦೨ ರಂದು ಭಾಂದ್ರ ಬಾಗದಲ್ಲಿ ಸಲ್ಮಾನ್ ಖಾನ್ ಬೇಕರಿಯೊಂದಕ್ಕೆ ಕಾರು ನುಗ್ಗಿಸಿದ್ದ ಘಟನೆಯಲ್ಲಿ, ಫುಟ್ ಫಾತಿನ ಮೇಲೆ ಮಲಗಿದ್ದ ಒಬ್ಬನನ್ನು ಬಲಿ ತೆಗೆದುಕೊಂಡಿತ್ತು ಮತ್ತು ಇನ್ನಿತರ ನಾಲ್ಕು ಜನರು ತೀವ್ರವಾಗಿ ಗಾಯಗೊಂಡಿದ್ದರು ಎಂಬುದು ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಯ ಆರೋಪದ ಸಾರಾಂಶ.

"ನಾನು ಸಲ್ಮಾನ್ ಅವರನ್ನು ಮುಂದಿನ ದಿನ ಬೆಳಗ್ಗೆ ೯ ಘಂಟೆಗೆ ಭೇಟಿ ಮಾಡಿದೆ. (ಘಟನೆ ನಡೆದಿದ್ದು ರಾತ್ರಿ ಮೂರು ಘಂಟೆಗೆ) ಮತ್ತು ಆಗ ಅವರನ್ನು ತಬ್ಬಿಕೊಂಡೆ, ಅವರಿಂದ ಮದ್ಯದ ವಾಸನೆ ಬರಲಿಲ್ಲ" ಎಂದು ನಟ ಚಂಕಿ ಪಾಂಡೆ ಅವರ ಸಹೋದರ ಚಿಕ್ಕಿ ಪಾಂಡೆ ನ್ಯಾಯಾಧೀಶ ಡಿ ಡಬ್ಲ್ಯೂ ದೇಶಪಾಂಡೆ ಅವರಿಗೆ ತಿಳಿಸಿದ್ದಾರೆ.

ಪ್ರತಿ-ವಿಚಾರಣೆ ವೇಳೆ, ಪಾಂಡೆ ಅವರು ಅಮೇರಿಕನ್ ಎಕ್ಸ್ ಪ್ರೆಸ್ ಬೇಕರಿ (ದುರ್ಘಟನೆ ನಡೆದ ಸ್ಥಳ)ಬಳಿ, ನಿಧಾನಗತಿಯ ವಾಹನ ಚಾಲನೆಯಿರುತ್ತದೆ ಮತ್ತು ಆ ಪ್ರದೇಶ ಯಾವಾಗಲೂ ಬ್ಯುಸಿ ಇರುತ್ತಿತ್ತು ಎಂದು ಸಲ್ಮಾನ್ ಲಾಯರ್ ಶ್ರೀಕಾಂತ್ ಶಿವಾಡೆ ಅವರಿಗೆ ತಿಳಿಸಿದ್ದಾರೆ.

ಸರ್ಕಾರಿ ಅಭಿಯೋಜಕ ಪ್ರದೀಪ್ ಗರತ್ ಮಾಡಿದ ಮರು ವಿಚಾರಣೆಯಲ್ಲಿ, ಅಲ್ಲಿ ೨೪ ಘಂಟೆಗಳೂ ವಾಹನ ದಟ್ಟಣೆ ಇರುತ್ತದೆಯೇ ಎಂಬ ಪ್ರಶ್ನೆಗೆ: "ಯಾವಾಗಲೂ ಇರುವುದಿಲ್ಲ" ಎಂದಿದ್ದಾರೆ.

ಸಾಮಾನ್ಯವಾಗಿ ವಾಹನಗಳ ಚಲನೆ ಇಲ್ಲದಿರುವಾಗ ಈ ಅಪಘಾತ ನಡೆದಿರುವುದು ಗಮನೀಯ.

ತನ್ನ ಸಹೋದರಿ ಅರ್ಪಿತಾ ಅವರ ಮದುವೆ ಸಿದ್ಧತೆಯಲ್ಲಿ ಕಾರ್ಯನಿರತವಾಗಿರುವುದರಿಂದ ಸಲ್ಮಾನ್ ಖಾನ್ ಅವರು ಇಂದು ವಿಚಾರಣೆಗೆ ಹಾಜರಾಗಿರಲಿಲ್ಲ.

ಇತರ ಪ್ರತ್ಯಕ್ಷದರ್ಶಿಗಳ ವಿಚಾರಣೆ ನವೆಂಬರ್ ೨೪ ಮತ್ತು ೨೫ ರಂದು ನಡೆಯಲಿದ್ದು, ಅಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಲ್ಮಾನ್ ಖಾನ್ ಗೆ ಕೋರ್ಟ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com