
ನ್ಯೂಯಾರ್ಕ್: ಜಗತ್ತಿನ ಪ್ರಭಾವಿ ವ್ಯಕ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಒಬ್ಬರು! ಹೌದು, 2014ನೇ ಸಾಲಿನ ಫೋರ್ಬ್ಸ್ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ 15ನೇ ಸ್ಥಾನ ಪಡೆದಿದ್ದಾರೆ.
ಪಟ್ಟಿಗೆ ಮೋದಿ ಹೀಗೆ ಸೇರ್ಪಡೆಗೊಳ್ಳುತ್ತಿರುವುದು ಇದೇ ಮೊದಲು. ಹೊಸ ಪಟ್ಟಿಯಲ್ಲಿ ಒಟ್ಟು 72 ಮಂದಿ ಹೆಸರಿದ್ದು, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅಗ್ರಸ್ಥಾನದಲ್ಲಿದ್ದಾರೆ.
ಸೋನಿಯಾ ಹೊರಕ್ಕೆ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಈ ಬಾರಿ ಪಟ್ಟಿಯಿಂದ ಹೊರಗುಳಿದಿರುವುದು ಪರಿಷ್ಕೃತ ಪಟ್ಟಿಯಲ್ಲಿನ ಅಚ್ಚರಿ. ಕಳೆದ ವರ್ಷ ಅವರು ಈ ಪಟ್ಟಿಯಲ್ಲಿ 21 ನೇ ಸ್ಥಾನದಲ್ಲಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಸ್ ಅಂಬಾನಿ (36ನೇ ಸ್ಥಾನ), ಆರ್ಸೆಲರ್ ಮಿತ್ತಲ್ ಕಂಪನಿಯ ಮುಖ್ಯಸ್ಥ ಲಕ್ಷ್ಮಿ ಮಿತ್ತಲ್(57), ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ (64) ಪಟ್ಟಿಯಲ್ಲಿರುವ ಇತರೆ ಭಾರತೀಯರು.
Advertisement