ವೈದ್ಯ ಪರೀಕ್ಷೆ ಅಕ್ರಮದಲ್ಲಿ ವಿದ್ಯಾರ್ಥಿಗಳು ಶಾಮೀಲು

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸ್ನಾತಕೋತ್ತರ ವೈದ್ಯ ಪರೀಕ್ಷೆಯ...
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸ್ನಾತಕೋತ್ತರ ವೈದ್ಯ ಪರೀಕ್ಷೆಯ ಅಕ್ರಮದಲ್ಲಿ ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಶಾಮೀಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ವಿವಿಯ ಸಿಂಡಿಕೇಟ್ ಸದಸ್ಯ ಡಾ.ರಾಜೇಶ್ ಶೆಣೈ ವಿಚಾರಣೆ ಸಮಿತಿ ವರದಿ ಆಧರಿಸಿ ವಿವಿಯು ಕಳೆದ 2014ರ ಮೇನಲ್ಲಿ ನಡೆದ ಸ್ನಾತಕೋತ್ತರ ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳ ವಿರುದ್ಧ ಸಲ್ಲಿಸಿದ್ದಾರೆ.

ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಒಡೆತನದ ಜೆಜೆಎಂಪಿ ಸೇರಿದಂತೆ 8 ಕಾಲೇಜಿನ 10 ವಿದ್ಯಾರ್ಥಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೇ-ಜೂನ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳನ್ನೇ ಅದಲು ಬದಲು ಮಾಡಿದ್ದಾರೆ ಎಂಬ ಆರೋಪವನ್ನು ಈ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.

ಮಾಧ್ಯಮಗಳಲ್ಲಿ ವರದಿ ಬಹಿರಂಗವಾದ ಮೇಲೆ ವಿವಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಇದಲ್ಲದೇ ಕುಲ ಸಚಿವರನ್ನು ಕೂಡ ಅಮಾನತು ಗೊಳಿಸಿತ್ತು. ಇದಲ್ಲದೇ ವಿಧಿವಿಜ್ಞಾನ ಪರೀಕ್ಷೆ ನಡೆಸಿದ ಬಳಿಕ ಅಕ್ರಮ ನಡೆದಿರುವುದು ಖಾತ್ರಿಯಾಗಿತ್ತು.

ಪ್ರಕರಣದ ಬಗ್ಗೆ ಮಾತನಾಡಿರುವ ಕಿಮ್ಸ್ ಪ್ರಾಂಶುಪಾಲ ಗೋಪಾಲ, ಅಕ್ರಮದ ಬಗ್ಗೆ ಮಾಹಿತಿಯಿಲ್ಲ. ಕಾಲೇಜು ಆವರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾಲಯದ ಅಧಿಕಾರಿಗಳು ಮಾತ್ರ ಕಠಿಣ ಕ್ರಮ ಜರುಗಿಸಬಹುದು ಎಂದು ಹೇಳಿದ್ದಾರೆ.

ಅಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳು

ಡಾ.ಬಸವೇಶ, ಎಂಡಿ ಜನರಲ್ ಸರ್ಜರಿ, ಎಂಆರ್‌ಎಂಸಿ ಕಲಬುರಗಿ

ಡಾ.ಕುವಲ್ ಸಿಂಹಾ, ಎಂಡಿ ಡೆರ್ಮಾಟಲಜಿ, ಜೆಜೆಎಂಸಿ ದಾವಣಗೆರೆ

ಡಾ.ಆಂದಿತಾ ರಾಯ್, ಎಂಡಿ ರೇಡಿಯೋಲಜಿ, ಕೆವಿಜೆ ಸುಳ್ಯ

ಡಾ.ಸುರೇಶ್ ಕನಮಾಡಿ, ಎಂಡಿ ರೇಡಿಯೋಲಜಿ, ಅಲ್ ಅಮೀನ್ ವಿಜಯಾಪುರ

ಡಾ.ಶರಣಬಸಪ್ಪ, ಎಂಡಿ ಜನರಲ್ ಸರ್ಜರಿ-ಎಂಆರ್‌ಎಂಸಿ ಕಲಬುರಗಿ

ಡಾ.ಗುರುಪ್ರೀತ್, ಎಂಎಸ್ ಆರ್ಥಪೆಡಿಕ್ಸ್, ಕಿಮ್ಸ್ ಬೆಂಗಳೂರು

ಡಾ.ಶಿವರಾಜು, ಎಂಡಿ ರೇಡಿಯೋಲಜಿ, ನವೋದಯ ರಾಯಚೂರು

ಡಾ.ಸೈಯದ್, ಎಂಡಿ ಜನರಲ್ ಸರ್ಜರಿ, ಅಲ್ ಅಮೀನ್ ವಿಜಯಾಪುರ

ಡಾ.ಪುನೀತ್ ಪಾಲ್, ಎಂಡಿ ಜನರಲ್ ಸರ್ಜರಿ, ಎಂವಿಜೆ ಹೊಸಕೋಟೆ

ಡಾ.ಪಾಂಡಿಯಾ ರಾಜ್, ಎಂಡಿ ಜನರಲ್ ಸರ್ಜರಿ, ಎಂವಿಜೆ ಹೊಸಕೋಟೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com