ಸ್ವಚ್ಛ ಭಾರತ ಹೆಸರಲ್ಲಿ ಹೀಗೊಂದು ತುಚ್ಛ ಕೆಲಸ

ಮಹಾತ್ಮ ಗಾಂಧೀಜಿಯ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸುವ ಪರಿ ಇದೇನಾ?...
ಕಾರ್ಮಿಕನೊಬ್ಬ ಕಸದ ರಾಶಿ ಸುರಿಯುತ್ತಿರುವ ದೃಶ್ಯದ  ಸಾಂಧರ್ಭಿಕ ಚಿತ್ರ
ಕಾರ್ಮಿಕನೊಬ್ಬ ಕಸದ ರಾಶಿ ಸುರಿಯುತ್ತಿರುವ ದೃಶ್ಯದ ಸಾಂಧರ್ಭಿಕ ಚಿತ್ರ

ನವದೆಹಲಿ: ಮಹಾತ್ಮ ಗಾಂಧೀಜಿಯ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸುವ ಪರಿ ಇದೇನಾ? ಸಾಮಾಜಿಕ ಹಿತಾಸಕ್ತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಯೋಜನೆಗೆ ನೀಡುತ್ತಿರುವ ಬೆಲೆ ಇದೇನಾ? ಸ್ವಚ್ಛವಾಗಿದ್ದ ಮಾರ್ಗದ ಮೇಲೆ ಕಸದ ರಾಶಿಯನ್ನು ಸುರಿದು, ನಂತರ ಅದೇ ಕಸವನ್ನು ಗುಡಿಸುವ ಮೂಲಕ ನಾಚಿಕೆಗೇಡಿನ ಕೆಲಸ ದೆಹಲಿಯಲ್ಲಿ ನಡೆದಿದೆ.

ಭಾರತವನ್ನು ಸ್ವಚ್ಛಗೊಳಿಸುವ ಸಲುವಾಗಿ ಮೋದಿ ತಂದ ಸ್ವಚ್ಛ ಭಾರತ ಅಭಿಯಾನವನ್ನು ಇಂದು ರಾಜಕೀಯ ವ್ಯಕ್ತಿಗಳು ಪ್ರಚಾರದ ಕೈಗೊಂಬೆಯಾಗಿಸಿಕೊಂಡಂತಿದೆ. ಪ್ರಚಾರಕ್ಕಾಗಿ ಕಾರ್ಮಿಕನೊಬ್ಬನ ಕೈಯಲ್ಲಿ ಕಸದ ರಾಶಿಯೊಂದನ್ನು ಸುರಿದು ನಂತರ ಅದೇ ಕಸವನ್ನು ಬಿಜೆಪಿ ಮುಖ್ಯಸ್ಥರು ಗುಡಿಸುವಂತಹ ನಾಟಕವಾಡಿ, ದೇಶ ಸ್ವಚ್ಛಗೊಳಿಸುವ ನೆಪದಲ್ಲಿ ಬಿಟ್ಟಿ ಪ್ರಚಾರ ಪಡೆದುಕೊಳ್ಳುವಂತಹ ಕಾರ್ಯ ಯಾರನ್ನು ಮೆಚ್ಚಿಸುವ ಸಲುವಾಗಿ?.... ಎಂಬುದು ಎಲ್ಲರ ಪ್ರಶ್ನೆಯಾಗಿದ್ದು, ದೇಶದಲ್ಲೆಡೆ ವಿವಾದವೊಂದನ್ನು ಸೃಷ್ಠಿ ಮಾಡಿದೆ.


ಕೇವಲ ಪ್ರಧಾನಿ ಮಂತ್ರಿ ನರೇಂದ್ರಿ ಮೋದಿಯವರ ಗಮನ ಸೆಳೆಯುವುದಕ್ಕಾಗಿಯೋ ಅಥವಾ ಪ್ರಚಾರಕ್ಕಾಗಿಯೋ ಇಂತಹ ಕಾರ್ಯಗಳನ್ನು ರಾಜಕೀಯದ ಗಣ್ಯವ್ಯಕ್ತಿಗಳು ಮಾಡುತ್ತಿರುವುದು ಇಂದು ದೇಶ ತಲೆಬಗ್ಗಿಸುವಂತಾಗಿದ್ದು, ಮೋದಿಯವರಿಗೆ ಮುಜುಗರ ತರುವಂತಾಗಿದೆ.

ಈ ಕಾರ್ಯಕ್ರಮದಲ್ಲಿ ದೆಹಲಿ ಬಿಜೆಪಿ ಮುಖ್ಯಸ್ಥ ಸತೀಶ್ ಉಪಾಧ್ಯಾಯ್ ಅವರು ಪಾಲ್ಗೊಂಡಿರುವುದು ವಿಶೇಷವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com