
ವಾರಣಾಸಿ: ಉತ್ತರಪ್ರದೇಶ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಅದೇ ಕ್ಷೇತ್ರದ ಜಯಪುರ ಗ್ರಾಮವನ್ನು ದತ್ತು ಪಡೆದಿದ್ದಾರೆ.
ಗ್ರಾಮವೊಂದನ್ನು ದತ್ತು ಪಡೆದು ಆದರ್ಶ ಗ್ರಾಮ ನಿರ್ಮಿಸುವಂತೆ ಸಂಸದರಿಗೆ ಕರೆ ನೀಡಿದ್ದ ಮೋದಿ, ಮೊದಲಿಗೆ ತಾವೇ ಗ್ರಾಮವೊಂದನ್ನು ದತ್ತು ಪಡೆದರು. ಈ ವೇಳೆ ಮಾತನಾಡಿದ ಅವರು, ಯಾವೊಬ್ಬ ಶಾಸಕರು ಗ್ರಾಮಗಳನ್ನು ದತ್ತು ಪಡೆಯದಿರುವುದಕ್ಕೆ ವಿಷಾಧಿಸಿದರು.
ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದಾಗಿ ಆಗಸ್ಟ್ 15ರಂದು ಕೆಂಪುಕೋಟೆ ಮೇಲೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಪ್ರತಿಯೊಬ್ಬ ಸಂಸದನು ಆದರ್ಶ ಗ್ರಾಮ ಯೋಜನೆಯಡಿ ಒಂದು ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು ಎಂದು ಸಂಸದರಿಗೆ ಸೂಚಿಸಿದ್ದರು.
ಜಯಪುರ ಗ್ರಾಮವನ್ನು ದತ್ತು ಪಡೆದಿರುವ ಮೋದಿ ಅವರು ಗ್ರಾಮವನ್ನು ಯಾವ ಮಟ್ಟಿಗೆ ಅಭಿವೃದ್ಧಿ ಪಡಿಸುತ್ತಾರೆ ಎಂದು ಕಾದು ನೋಡಬೇಕಿದೆ.
Advertisement