ವಾಷಿಂಗ್ಟನ್: 2011ರಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ವಿಶ್ವದ ನಂ.1 ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆ ಮಾಡಿದ ಯೋಧನ ಹೆಸರು ಈಗ ಬಹಿರಂಗವಾಗಿದೆ.
ಅಮೆರಿಕದ ನಿದ್ದೆಗೆಡಿಸಿದ್ದ ಲಾಡೆನ್‌ನ ತಲೆಗೆ ಸಾವಿನ ಗುಂಡನ್ನು ನುಗ್ಗಿಸಿದ್ದ ಸೀಲ್ ಪಡೆಯ ಹೀರೋನ ಹೆಸರು ರಾಬರ್ಟ್ ಒ ನೀಲ್(38). ಇವರ ಹೆಸರನ್ನು ಈವರೆಗೆ ಗುಪ್ತವಾಗಿಡಲಾಗಿತ್ತು.
ಮುಂದಿನ ವಾರ ಫಾಕ್ಸ್ ನ್ಯೂಸ್ ಟಿವಿ ವಿಶೇಷ ಕಾರ್ಯಕ್ರಮದಲ್ಲಿ ನೀಲ್ ಅವರು ತಮ್ಮ ಬಗೆಗಿನ ಎಲ್ಲ ವಿವರಗಳನ್ನು ನೀಡಲಿದ್ದಾರೆ. ಅಮೆರಿಕ ಸರ್ಕಾರ ಗುಪ್ತವಾಗಿಟ್ಟಿದ್ದ ಹೆಸರನ್ನು ಈಗ ನೀಲ್ ಅವರೇ ಬಹಿರಂಗಪಡಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. ಜತೆಗೆ ಇಸಿಸ್ ಸೇರಿ ಹಲವು ಉಗ್ರ ಸಂಘಟನೆಗಳ ಕೆಂಗಣ್ಣಿಗೆ ನೀಲ್ ಅವರು ಗುರಿಯಾಗುವ ಸಾಧ್ಯತೆಯೂ ಇದೆ. ಆದರೆ ನಮಗೆ ಯಾರ ಬಗ್ಗೆಯೂ ಭಯವಿಲ್ಲ ಎಂದು ನೀಲ್ ತಂದೆ ಹೇಳಿದ್ದಾರೆ.
ನೀಲ್ ಅವರ ಸಾಧನೆಯನ್ನು ಈಗಾಗಲೇ 'ಕ್ಯಾಪ್ಟನ್ ಫಿಲಿ ಪ್ಸ್' 'ಝೀರೋ ಡಾರ್ಕ್ ಥರ್ಟಿ', 'ಲೋನ್ ಸರ್ವೈವರ್' ಎಂಬ ಹಾಲಿವುಡ್ ಚಿತ್ರಗಳಲ್ಲಿ ಬಣ್ಣಿಸಲಾಗಿದೆ.
Advertisement