
ನವದೆಹಲಿ: ಭಾರತೀಯ ನೌಕಾಪಡೆಗೆ ಸೇರಿ ಹಡಗೊಂದು ವಿಶಾಪಟ್ಟಣಂ ಬಂದರು ಸಮೀಪ ಮುಳುಗಡೆಯಾಗಿ, ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ನೌಕಾ ಪಡೆ ಆದೇಶ ಹೊರಡಿಸಿದೆ. ಘಟನೆಯಲ್ಲಿ ನಾಲ್ಕು ಮಂದಿ ಕಾಣೆಯಾಗಿದ್ದು, ಶೋಧಾ ಕಾರ್ಯ ಮುಂದುವರೆದಿದೆ.
ನೌಕಾ ಪಡೆಯ ಲೆಫ್ಟಿನೆಂಟ್ ಕಮಾಂಡರ್ ರೋಹನ್ ಕುಲಕರ್ಣಿ ಮೃತಪಟ್ಟಿದ್ದಾರೆ. ಇವರು ವಿಶಾಖಪಟ್ಟಣಂ ಬಂದರು ಭೇಟಿಗೆ ಎಂದು ಆಗಮಿಸಿದ್ದು, ಕಳೆದ ರಾತ್ರಿ ಬಂದರು ಸಮೀಪದ ನೌಕಾ ಹಡಗು ವೀಕ್ಷಣೆ ಮಾಡುತ್ತಿದ್ದ ವೇಳೆ ಸುಮಾರು 8 ಗಂಟೆಗೆ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ ನಾಲ್ಕು ಮಂದಿ ಕಾಣೆಯಾಗಿದ್ದು, ಸಿಬ್ಬಂದಿ ಶೋಧಾ ಕಾರ್ಯ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ನೌಕಾ ತನಿಖಾ ಮಂಡಳಿ, ಘಟನೆಯ ತನಿಖೆಗೆ ಮುಂದಾಗಿದೆ. 31 ವರ್ಷಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದ ಹಡಗಿನ ದುರಂತಕ್ಕೀಡಾಗಿರುವುದು ಭಾರತೀಯ ನೌಕಾ ಪಡೆಗೆ ಆಘಾತ ಉಂಟುಮಾಡಿದೆ. ನೌಕಾ ಮುಳುಗಡೆ ಕುರಿತು ನಿಖರ ಕಾರಣ ತಿಳಿದು ಬಂದಿಲ್ಲ. ರಾತ್ರಿ ವೇಳೆ ಏಕಾಏಕಿ ಕಂಪಾರ್ಟ್‌ಮೆಂರ್ಟ್‌ವೊಂದಕ್ಕೆ ನೀರು ನುಗ್ಗಿದ್ದರಿಂದ ಹಡಗು ಮುಳುಗಡೆಯಾಗಿದೆ.
1983 ರಲ್ಲಿ ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥೆಯಿಂದ ಹಡಗು ನಿರ್ಮಿತವಾಗಿದ್ದು, ಭಾರತೀಯ ನೌಕಾ ಪಡೆಗೆ 32 ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು. ಇತ್ತೀಚೆಗಷ್ಟೇ ಜಲಾಂತರ್ಗಾಮಿಗಳಾದ ಐಎನ್‌ಎಸ್ ಸಿಂಧೂರತ್ನ ದುರಂತಕ್ಕೀಡಾಗಿತ್ತು.
Advertisement