ಕೇಂದ್ರ ಸಂಪುಟ ವಿಸ್ತರಣೆ ನಾಳೆ

ಪ್ರಧಾನಿ ಮೋದಿ ಸಂಪುಟದ ಮೊದಲ ವಿಸ್ತರಣೆ ಭಾನುವಾರ ನಡೆಯಲಿದೆ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ/ಪಣಜಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದ ಮೊದಲ ವಿಸ್ತರಣೆ ಭಾನುವಾರ ನಡೆಯಲಿದೆ.

ಶಿವಸೇನೆ, ಟಿಡಿಪಿ ಸದಸ್ಯರೂ ಸೇರಿದಂತೆ ಹಲವು ಹೊಸ ಮುಖಗಳು ಸಂಪುಟದಲ್ಲಿ ಸ್ಥಾನ ಪಡೆದು ಕೊಳ್ಳಲಿವೆ. ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರ ಪ್ರಮಾಣ ಸ್ವೀಕಾರ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದೇ ವೇಳೆ, ಕೇಂದ್ರದಲ್ಲಿ ರಕ್ಷಣಾ ಸಚಿವರ ಸ್ಥಾನಕ್ಕೇರಲಿದ್ದಾರೆ ಎಂದು ಹೇಳಲಾದ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ಶನಿವಾರ ರಾಜಿನಾಮೆ ನೀಡಲಿದ್ದಾರೆ. ಅವರ ಉತ್ತರಾಧಿಕಾರಿ ಹಾಗೂ ನೂತನ ಸಚಿವರ ಹೆಸರೂ ಶನಿವಾರವೇ ಬಹಿರಂಗವಾಗಲಿದೆ.

ಯಾರೆಲ್ಲ ಸೇರ್ತಾರೆ?
ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಮೊದಲ ಬಾರಿಗೆ ಸಚಿವ ಸಂಪುಟವನ್ನು ವಿಸ್ತರಿಸುತ್ತಿದ್ದು, ಸುಮಾರು 10 ಮಂದಿ ಹೊಸಬರು ಸಂಪುಟ ಸೇರುವ ಸಾಧ್ಯತೆಯಿದೆ. ಈ ಹೊಸ ಮುಖಗಳಲ್ಲಿ ಪಂಜಾಬ್‌ನ ಬಿಜೆಪಿ ಸಂಸದ ವಿಜಯ್ ಸಂಪ್ಲಾ ಹೆಸರೂ ಕೇಳಿಬರುತ್ತಿದೆ.

ಮುಖ್ತಾರ್ ಅಬ್ಬಾಸ್ ನಖ್ವಿ
ಜಯಂತ್ ಸಿನ್ಹಾ
ಬೀರೆಂದರ್ ಸಿಂಗ್
ಗಿರಿರಾಜ್ ಸಿಂಗ್ ಅಥವಾ ಭೋಲಾಸಿಂಗ್
ಕರ್ನಲ್ ಸೋನಾರಾಮ್ ಚೌಧರಿ
ಗಜೇಂದ್ರ ಸಿಂಗ್ ಶೇಖಾವತ್
ಹಂಸರಾಜ್ ಅಹಿರ್
ವೈ.ಎಸ್. ಚೌಧರಿ ಅಥವಾ ರಾಮ್ ಮೋಹನ್ ನಾಯ್ಡು (ಟಿಡಿಪಿ)
ಅನಿಲ್ ದೇಸಾಯಿ (ಶಿವಸೇನೆ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com