ಕೈಗೆಟುಕುವ ದರದಲ್ಲಿ ಟ್ಯಾಕ್ಸಿ ಸೇವೆ

ಬಸ್, ಟ್ಯಾಕ್ಸಿ ಆಟೋಗಳ ಪ್ರಯಾಣ ದುಬಾರಿ ಎನ್ನುವ ಈ ಕಾಲದಲ್ಲಿ ನಾಲ್ಕು ಕಿ.ಮೀ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಸ್, ಟ್ಯಾಕ್ಸಿ ಆಟೋಗಳ ಪ್ರಯಾಣ ದುಬಾರಿ ಎನ್ನುವ ಈ ಕಾಲದಲ್ಲಿ ನಾಲ್ಕು ಕಿಲೋಮೀಟರ್‌ಗಳ ಪ್ರಯಾಣಕ್ಕೇ 49 ನೀಡಿ ಕಾರಲ್ಲಿ ಪ್ರಯಾಣಿಸಬಹುದು ಎಂದರೆ ಅಚ್ಚರಿಯಾಗಬಹುದು. ಆದರೆ, ಇದು ಸತ್ಯ. ಆಟೋಗಿಂತ ಕಡಿಮೆ ವೆಚ್ಚದಲ್ಲಿ ನಗರದಲ್ಲಿ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಟ್ಯಾಕ್ಸಿ ಫಾರ್ ಷ್ಯೂರ್ ಸಂಸ್ಥೆ ತನ್ನ ವಿಶಿಷ್ಟ ದರ ನಿಗದಿಯಿಂದ ಎಲ್ಲರ ಗಮನ ಸೆಳೆಯುತ್ತಿದೆ.
ಟ್ಯಾಕ್ಸಿ ಸವಾರಿ ದುಬಾರಿ. ರಾತ್ರಿ ಹೊತ್ತು ಸಂಚಾರ ಮಾಡಲು ಒಂದಕ್ಕೆ ಎರಡು ಪಟ್ಟು ಹಣ ಪಾವತಿಸಬೇಕು ಎನ್ನುವುದು ಸಾಮಾನ್ಯವಾಗಿ ಟ್ಯಾಕ್ಸಿ ಸೇವೆ ಬಗ್ಗೆ ಕೇಳಿಬರುವ ಸಂಗತಿ. ಆದರೆ ಟ್ಯಾಕ್ಸಿ ಫಾರ್ ಷ್ಯೂರ್ ಈ ಸಂಗತಿಗಳನ್ನು ಸುಳ್ಳಾಗಿಸಿದೆ. ಈ ಸಂಸ್ಥೆಯ ಟ್ಯಾಕ್ಸಿಗಳಲ್ಲಿ ಕೇವಲ 49ರಲ್ಲಿ 4 ಕಿ.ಮೀ ಸಂಚರಿಸಬಹುದು.

ದರ ನಿಗದಿ ಹೇಗೆ?
ಇದರಲ್ಲಿ 4, 5 ಹಾಗೂ 10 ಕಿ.ಮೀ. ಗಳಂತೆ 3 ಪ್ಯಾಕೇಜ್ ಇರುತ್ತದೆ. 4 ಕಿಲೋಮೀಟರ್ ದಾಟಿದರೆ 63ನ್ನು ನೀಡಬೇಕಾಗುತ್ತದೆ. 5 ಕಿ.ಮೀ ಹಾಗೂ 10 ಕಿ.ಮೀ ದಾಟಿದರೆ ಪ್ರತಿ ಕಿಲೋಮೀಟರ್‌ಗೆ 14 ಪಾವತಿಸಬೇಕು. ಆಟೋಗಳಲ್ಲಿ 4 ಕಿ.ಮೀಗೆ 53 ನೀಡಬೇಕಾಗುತ್ತದೆ. ವೋಲಾ ಟ್ಯಾಕ್ಸಿಗಳಲ್ಲಿ 80 ರಿಂದ 100 ತೆಗೆದುಕೊಳ್ಳುತ್ತಾರೆ. ಆದರೆ, ಟ್ಯಾಕ್ಸಿ ಫಾರ್ ಷ್ಯೂರ್‌ನಲ್ಲಿ ಕೇವಲ 49ರ ದರದಲ್ಲಿ ನಗರದ ಯಾವುದೇ ಕಡೆಗೂ ಸಂಚರಿಸಬಹುದು. ಹಗಲು ಮತ್ತು ರಾತ್ರಿಗಳೆರಡರಲ್ಲೂ ಒಂದೇ ದರ ಇರುವುದು ಇದರ ಮತ್ತೊಂದು ವಿಶೇಷ.

ಮಧ್ಯರಾತ್ರಿ 1 ಗಂಟೆಗೆ ಟ್ಯಾಕ್ಸಿ ಹತ್ತಿದರೂ, ಕೇವಲ 49 ಪಾವತಿಸಿ ಆಯ್ಕೆಯ ಸ್ಥಳ ತಲುಪಬಹುದು. 5 ಕಿ.ಮೀ ಮೀರಿ 10 ಕಿ.ಮೀ. ಒಳಗೆ ಸಂಚರಿಸಿದರೆ 133ನ್ನು ನೀಡಬೇಕಾಗುತ್ತದೆ.

ತಮ್ಮ ಕಂಪನಿಯ ಸೇವೆಯಿಂದಾಗಿ 15 ಕಿ.ಮೀ ಪ್ರಯಾಣಕ್ಕೆ ಸಾರ್ವಜನಿಕರು ತೆರಬೇಕಿದ್ದ ದರಗಳಲ್ಲಿ ಗಣನೀಯ ಇಳಿಕೆಯಾಗಿದೆ. ಹೈದರಾಬಾದ್‌ನಲ್ಲಿ ಶೇ.50, ದೆಹಲಿಯಲ್ಲಿ ಶೇ.45, ಪುಣೆಯಲ್ಲಿ ಶೇ.25 ಹಾಗೂ ಬೆಂಗಳೂರು ಚೆನ್ನೈನಲ್ಲಿ ಶೇ.33ರಷ್ಟು ವೆಚ್ಚ ಕಡಿಮೆಯಾಗಲಿದೆ ಎಂದು ಟ್ಯಾಕ್ಸಿ ಫಾರ್ ಷೂರ್ ಸಂಸ್ಥೆ ಹೇಳಿದೆ. ಈಗಾಗಲೇ 14 ನಗರಗಳಲ್ಲಿ ಈ ಸಂಸ್ಥೆ ಹೇಳಿದೆ. ಈಗಾಗಲೇ 14 ನಗರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ 3 ಸಾವಿರ ಟ್ಯಾಕ್ಸಿಗಳು ಸೇವೆ ನೀಡಲು ಸಿದ್ಧವಾಗಿವೆ. ಒಂದು ಕರೆ ಮಾಡಿದರೆ ಅವರಿದ್ದ ಜಾಗಕ್ಕೆ ಟ್ಯಾಕ್ಸಿ ಬಂದು ನಿಲ್ಲುತ್ತದೆ.

ಮೊಬೈಲ್ ಮೂಲಕವೂ ಬುಕ್ಕಿಂಗ್

ಟ್ಯಾಕ್ಸಿ ಬುಕ್ಕಿಂಗ್‌ಗಾಗಿ ಕಾಲ್‌ಸೆಂಟರ್, ವೆಬ್‌ಸೈಟ್‌ಗಳ ಸಹಾಯ ಪಡೆಯಬಹುದು. ಅಲ್ಲದೇ, ಮೊಬೈಲ್‌ಗಳಿಗಾಗಿ ತಯಾರಿಸಲಾಗಿರುವ ಆ್ಯಪ್‌ಗಳ ಮೂಲಕವೂ ಟ್ಯಾಕ್ಸಿ ಬುಕ್ಕಿಂಗ್ ಮಾಡಲು ಅವಕಾಶವಿದೆ. ಈ ಆ್ಯಪ್ ಬಳಸಲು ಇಚ್ಛಿಸುವವರು ಆ್ಯಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ ಫೋನ್‌ಗಳಲ್ಲಿ ಕೇವಲ 15ಸೆಕೆಂಡ್‌ಗಳ ಒಳಗೆ ಬುಕ್ ಮಾಡಬಹುದು. ವೆಬ್‌ಸೈಟ್ www.taxiforure.com

- ನಯನ.ಬಿ.ಜೆ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com