ಮತ್ತೆ ಶಿವಸೇನೆ ಗಡುವು

ಮಹಾರಾಷ್ಟ್ರ ರಾಜ್ಯ ರಾಜಕಾರಣದ ತಿಕ್ಕಾಟ ದೆಹಲಿವರೆಗೂ ಎಳೆದಿದೆ. ಮೋದಿ ಸಂಪುಟದಲ್ಲಿ ...
ಉದ್ಧವ್ ಠಾಕ್ರೆ ಸಾಂದರ್ಭಿಕ ಚಿತ್ರ
ಉದ್ಧವ್ ಠಾಕ್ರೆ ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕಾರಣದ ತಿಕ್ಕಾಟ ದೆಹಲಿವರೆಗೂ ಎಳೆದಿದೆ. ಮೋದಿ ಸಂಪುಟದಲ್ಲಿ ಸೇರ್ಪಡೆಯಾಗುವ ಸಂಬಂಧ ದೆಹಲಿವರೆಗೂ ಬಂದಿದ್ದ ಅನಿಲ್ ದೇಸಾಯಿ, ದೆಹಲಿ ವಿಮಾನ ನಿಲ್ದಾಣದಿಂದಲೇ ಮಹಾರಾಷ್ಟ್ರಕ್ಕೆ ವಾಪಸಾಗಿದ್ದಾರೆ. ಹೀಗಾಗಿ ಭಾನುವಾರದ ಶಿವಸೇನೆಯಿಂದ ಯಾರೂ ಪ್ರಮಾಣ ಸ್ವೀಕರಿಸಲಿಲ್ಲ.

ಮಹಾರಾಷ್ಟ್ರದಲ್ಲಿ ನೀವು ಮೈತ್ರಿ ಕುರಿತಂತೆ ಯಾವ ನಿರ್ಧಾರ ಕೈಗೊಳ್ಳುತ್ತೀರ ಎಂಬುದನ್ನು ಮೊದಲು ಸ್ಪಷಪಡಿಸಿ, ಎನ್ಸಿಪಿ ಜತೆಗೂ ಯಾವ ಸಂಬಂಧವಿದೆ ಎಂಬುದನ್ನು ಖಚಿತಪಡಿಸಿ ಎಂದು ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಭಾನುವಾರ ಸಂಜೆ ಮುಂಬೈನಲ್ಲಿ ಆಗ್ರಹಿಸಿದ್ದಾರೆ.

ಮೈತ್ರಿ ಕತ್ತರಿಸಿಕೊಳ್ಳುವ ಸಂಬಂಧವೇ ಪತ್ರಿಕಾಗೋಷ್ಠಿ ಕರೆದಿದ್ದಾರೆ ಎಂದು ಭಾವಿಸಲಾಗಿತ್ತಾದರೂ, ಕೇವಲ ಬಿಜೆಪಿಗೆ ಗಡುವು ಕೊಡುವ ಮೂಲಕ ಗೋಷ್ಠಿ ಮುಗಿಸಿದ್ದಾರೆ.

ಎನ್ಸಿಪಿಯೊಂದಿಗೆ ನಿಮ್ಮ ಸಂಬಂಧ ತೃಪ್ತಿಕರವಾಗಿಲ್ಲ. ಇದನ್ನು ಮೊದಲು ಸ್ಪಷ್ಟಪಡಿಸಿ. ಇಲ್ಲದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಎಂಬ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಸೋಮವಾರದಿಂದ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ದೇವೇಂದ್ರ ಫಡ್ನವೀಸ್ ಸರ್ಕಾರ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com