ವರದಕ್ಷಿಣೆ ಸಾವು: ತಾಯಿ, ಮಗನಿಗೆ 10 ವರ್ಷ ಜೈಲು

ವರದಕ್ಷಿಣೆ ಸಾವು(ಸಾಂದರ್ಭಿಕ ಚಿತ್ರ)
ವರದಕ್ಷಿಣೆ ಸಾವು(ಸಾಂದರ್ಭಿಕ ಚಿತ್ರ)

ಮುಜಫರ್‌ನಗರ: ವರದಕ್ಷಿಣೆ ತರುವಂತೆ ಪೀಡಿಸಿದ್ದು, ಸೊಸೆಗೆ ಬೆಂಕಿ ಹಚ್ಚಿ ಸಾವಿಗೆ ಕಾರಣರಾಗಿದ್ದ ಗಂಡ ಮತ್ತು ಅತ್ತೆಗೆ ಸ್ಥಳೀಯ ಕೋರ್ಟ್ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಗೃಹಿಣಿ ಫರ್ಮಾನ ಎಂಬುವರಿಗೆ ಗಂಡ ಹಾಗೂ ಅತ್ತೆ ವರದಕ್ಷಿಣೆ ತರುವಂತೆ ಪೀಡಿಸಿದ್ದು ಅಲ್ಲದೆ 2011ರ ಸೆಪ್ಟೆಂಬರ್ 30ರಂದು ಬೆಂಕಿ ಹಚ್ಚಿದ್ದರು. ಬೆಂಕಿಯ ಜ್ವಾಲೆಗೆ ಫರ್ಮಾನ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ವರದಕ್ಷಿಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿದ ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿಗಳಾದ ಹರೀಶ್ ತಿರುಪತಿ ಅವರು, ಗಂಡ ವಾಜೀದ್ ಅಲಿ ಅತ್ತೆ ಸೈರಾ ಬಾನೊ ಎಂಬುವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ, ಇಬ್ಬರು ಅಪರಾಧಿಗಳಿಗೆ ತಲಾ ಐದು ಸಾವಿರ ದಂಡ ವಿಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಜೀದ್ ಅಲಿ ಮತ್ತು ಸೈರಾ ಬಾನೋ ಇಬ್ಬರು ಸೇರಿ ಬೆಂಕಿ ಹಚ್ಚಿರುವುದಾಗಿ ಪ್ರತ್ಯಕ್ಷದರ್ಶಿಗಳ ಸಾಕ್ಷಿ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಣಿಯ ಕೊನೆಯ ಹೇಳಿಕೆಯನ್ನಾಧರಿಸಿ ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com