ಬಿಜೆಪಿ ಪಟೇಲ್, ಕಾಂಗ್ರೆಸ್ ನೆಹರು

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ...
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 'ಲೆಗೆಸಿ ವಾರ್' (ಪರಂಪರೆ ಸಮರ) ಶುರುವಾಗಿದೆ. ಇತ್ತೀಚೆಗಷ್ಟೇ ಇಂದಿರಾಗಾಂಧಿ ಅವರ ಪುಣ್ಯತಿಥಿಯಂದು ಸರ್ದಾರ್ ಪಟೇಲ್ ರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಕೇಂದ್ರದ ಮೋದಿ ಸರ್ಕಾರವು ಕಾಂಗ್ರೆಸ್ ನ  ಕಣ್ಣನ್ನು ಕೆಂಪಗಾಗಿಸಿತ್ತು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಗುರುವಾರ ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರ 125ನೇ ಜನ್ಮದಿನ ಕಾರ್ಯಕ್ರಮವನ್ನು ದೆಹಲಿಯಲ್ಲಿ ಆಯೋಜಿಸಿತು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ  ಉಪಾಧ್ಯಕ್ಷ ರಾಹುಲ್ಗಾಂಧಿ ಅವರು ಪ್ರಧಾನಿ ಮೋದಿ ಅವರ ಹೆಸರೆತ್ತದೆ ಪರೋಕ್ಷವಾಗಿ ಅವರ ವಿರುದ್ಧ ಮುಗಿಬಿದ್ದರು.

ಮೋದಿ ಅವರು 'ಸ್ವಚ್ಛ ಭಾರತ ಅಭಿಯಾನ'ವನ್ನು ಖಂಡಿಸಿದ ರಾಹುಲ್, ಇದು ಕೇವಲ ಫೋಟೋ ತೆಗೆಸಿಕೊಳ್ಳುವ ಕ್ರಿಯೆಯಾಗಿ ಮಾರ್ಪಾಡಾಗಿದೆ ಎಂದು ಆರೋಪಿಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯಿಂದ ಹಿಡಿದು ಮಂಗಳಯಾನದವರೆಗಿನ ಎಲ್ಲ ಯಶಸ್ಸಿಗೆ ನೆಹರೂ ಅವರ ದೂರದೃಷ್ಟಿ ಕಾರಣ ಎಂದೂ ಅವರು ಹೇಳಿದರು.

ಇದೇ ವೇಳೆ ಮಾತನಾಡಿದ ಸೋನಿಯಾ, 'ನೆಹರೂರನ್ನು ವಿರೋಧಿಸುವವರು ಒಂದು ವ್ಯಕ್ತಿಯನ್ನು ವಿರೋಧಿಸುತ್ತಿಲ್ಲ. ಬದಲಾಗಿ ಒಂದು ಪರಂಪರೆಯನ್ನೇ ವಿರೋಧಿಸಿದಂತೆ. ನಮ್ಮ ದೇಶದ ಮೂಲ ವ್ಯವಸ್ಥೆಯನ್ನೇ ಕೆಲವರು ಹಾಳುಮಾಡಿತ್ತಿದ್ದಾರೆ. ನೆಹರೂ ಅವರ ಸ್ವತಂತ್ರ ಭಾರತದ ಕನಸನ್ನು ನುಚ್ಚುನೂರು ಮಾಡುವ ಶಕ್ತಿಗಳ ವಿರುದ್ಧ ಪಕ್ಷದ ಕಾರ್ಯಕರ್ತರೆಲ್ಲ ಒಗ್ಗಟ್ಟಾಗಿ ಹೋರಾಡಬೇಕು' ಎಂದರು.

ಫೋಟೋಕ್ಕೆ ಮಾತ್ರ

ಒಂದೆಡೆ ಮನೆಗಳಿಗೆ ಬಣ್ಣ ಹಚ್ಚಲಾಗುತ್ತದೆ. ರಸ್ತೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಮತ್ತೊಂದೆಡೆ, ವಿಷಬೀಜವನ್ನು ಬಿತ್ತಲಾಗುತ್ತದೆ.

ಈಗ ಆಕ್ರೋಶಭರಿತ ವ್ಯಕ್ತಿಗಳು ದೇಶವನ್ನು ಆಳುತ್ತಿದ್ದಾರೆ. ಇಂಗ್ಲಿಷ್ ಭಾಷೆ ಬಿಟ್ಟುಬಿಡಿ, ಹಿಂದಿಯಲ್ಲೇ ಎಲ್ಲವನ್ನೂ ಮಾಡಿ ಎನ್ನುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ನಾವೂ ಇದನ್ನೇ ಮಾಡಿದ್ದರೆ ಈಗ ಐಐಟಿ, ಐಐಎಂಗಳೇ ಇರುತ್ತಿರಲಿಲ್ಲ. ನಮ್ಮ ಯುವಕರು ವಿದೇಶಗಳಿಗೆ ಹೋಗಲು, ಅಲ್ಲಿ ಸಾಧನೆ ಮಾಡಲು ಆಗುತ್ತಿರಲಿಲ್ಲ.

ಈಗಿನ ಸರ್ಕಾರ ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ ಎನ್ನುತ್ತಿದೆ . ಆದರೆ ಏನನ್ನೂ ಮಾಡಿಲ್ಲ. ಕೇವಲ ಫೋಟೋಗೆ ಫೋಸ್ ನೀಡುವುದಷ್ಟೇ ಕಾಯಕವಾಗಿದೆ. ಕಾಂಗ್ರೆಸ್ ಪಕ್ಷ ತಪ್ಪು ಮಾಡಿಲ್ಲ ಎಂದು ನಾನು ಹೇಳುವುದಿಲ್ಲ ನಮ್ಮಿಂದಲೂ ತಪ್ಪಾಗಿದೆ.

ನೆಹರೂ ವಿಚಾರದಲ್ಲಿ ಪಕ್ಷದ ನಾಯಕರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರೇ ನೆಹರೂ ಹುಟ್ಟುಹಬ್ಬ ಆಚರಣೆ ಬಗ್ಗೆ ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದರು. ಪ್ರಧಾನಿ ವಿರುದ್ಧದ ಆರೋಪ ಸರಿಯಲ್ಲ.

ಡಾ.ಕರಣ್‌ ಸಿಂಗ್, ಕಾಂಗ್ರೆಸ್ ನಾಯಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com