
ಬ್ರಿಸ್ಬೇನ್: ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹಾರ್‌ಲಾಲ್ ನೆಹರು ಅವರ 125ನೇ ಜನ್ಮ ದಿನೋತ್ಸವವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಸ್ಟೇನ್‌ನಲ್ಲಿ ಚಾಚಾ ಅವರಿಗೆ ಗೌರವ ಸಲ್ಲಿಸಿದ್ದಾರೆ.
ನಮ್ಮ ದೇಶದ ಮೊದಲ ಪ್ರಧಾನಿಯವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಚಾಚಾ ಅವರಿಗೆ ನನ್ನ ಶ್ರದ್ಧಾಪೂರ್ವಕ ನಮಗಳು ಎಂದು ಟ್ವೀಟ್ ಮಾಡಿದ್ದಾರೆ.
ಚಾಚಾ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿರುವುದು ಖುಷಿ ತಂದಿದೆ. ಈ ದಿನವೇ ನಾನು ಮಕ್ಕಳೊಡನೆ ಸಂವಾದ ನಡೆಸುತ್ತಿರುವುದು ಮತ್ತಷ್ಟು ಖುಷಿಯಾಗಿದೆ ಎಂದು ಕ್ವೀನ್‌ಲ್ಯಾಂಡ್ ವಿಶ್ವಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಚಾಚಾ ಅವರ ನೆನಪುಗಳನ್ನು ಮೆಲುಕು ಹಾಕಿದ ಮೋದಿ, ಸ್ವಾತಂತ್ರ್ಯ ಹೋರಾಟದಲ್ಲಿ ಅವರು ವಹಿಸಿದ್ದ ಪಾತ್ರ ಹಾಗೂ ದೇಶದ ಮೊದಲ ಪ್ರಧಾನಿಯಾಗಿ ಅವರು ಅಂದಿನ ಸವಾಲುಗಳನ್ನು ಎದುರಿಸಿದ್ದ ಬಗ್ಗೆ ಸ್ಮರಿಸಿದರು.
ಆಸ್ಟ್ರೇಲಿಯಾದ ಬ್ರಿಸ್ಟೆನ್‌ನಲ್ಲಿ ನವೆಂಬರ್ 15 ಮತ್ತು 16ರಂದು ನಡೆಯಲಿರುವ ಪ್ರಸಕ್ತ ಸಾಲಿನ ಜಿ-20 ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಭೇಟಿ ನೀಡಿದ್ದಾರೆ.
Advertisement