ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ಪಡೆದ ಮಾಸ್ಟರ್ ಆಂಜಿನಯ್ಯ

ಅಂಗವೈಕಲ್ಯವಿದ್ದರೂ ಅಸಾಧಾರಣ ಸಾಧನೆ...
ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2014
ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2014
Updated on

ಬೆಂಗಳೂರು: ಅಂಗವೈಕಲ್ಯವಿದ್ದರೂ ಅಸಾಧಾರಣ ಸಾಧನೆ ತೋರಿದ ಬೆಂಗಳೂರಿನ ಮಾಸ್ಟರ್ ಎಲ್.ಆಂಜಿನಯ್ಯ 2014ನೇ ಸಾಲಿನ 'ರಾಷ್ಟ್ರೀಯ ಮಕ್ಕಳ ಪ್ರಶಸ್ತಿ' ಪಡೆದಿದ್ದಾರೆ.

ಮಕ್ಕಳ ದಿನಾಚರಣೆ ಅಂಗವಾಗಿ ನವದೆಹಲಿಯ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮಾ.ಆಂಜಿನಯ್ಯ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿಯು 10,000 ನಗದು ಹಾಗೂ ಬೆಳ್ಳಿ ಪದಕವನ್ನೊಳಗೊಂಡಿದೆ.

ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್‌ಗೆ ಸೇರಿದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮಾ.ಆಂಜಿನಯ್ಯ (12) ಅವರು ಕೈ, ಕಾಲು ಸಹಜವಾಗಿ ಬೆಳೆದಿಲ್ಲ, ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಂಪಸಾಗರ ಮೂಲದವರಾದ ಇವರು ಬಡವ ಕುಟುಂಬಕ್ಕೆ ಸೇರಿದ್ದಾರೆ.

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತಿರುವ ತಾಯಿ, ಮಗನ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಕೈ ಇಲ್ಲದ ಆಂಜಿನಯ್ಯ ಕಾಲಿನಿಂದಲೇ ಬರೆಯುತ್ತಾರೆ. ಚಿತ್ರವನ್ನು ಬಿಡುತ್ತಾರೆ.

ಈತನ ಚಿತ್ರಗಳು ವೃತ್ತಿಪರ ಕಲಾವಿದರಷ್ಟೇ ಉತ್ತಮವಾಗಿದೆ ಎಂಬ ಖ್ಯಾತಿಗೆ ಒಳಗಾಗಿದ್ದು, ರಾಜ್ಯಮಟ್ಟದ ಹಲವು ಸ್ಪರ್ಧೆಗಳಲ್ಲಿಯೂ ಬಹುಮಾನಗಳು ಬಂದಿವೆ.

ಇದೇ ವೇಳೆ ಸಮರ್ಥನಂ ಸಂಸ್ಥೆ ಎರಡನೇ ಬಾರಿಗೆ 'ಇನ್ಸ್‌ಟಿಟ್ಯೂಷನ್ಸ್‌' ವಿಭಾಗದಲ್ಲಿ 'ಮಕ್ಕಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ' ಪಡೆದಿದೆ. ಸಂಸ್ಥೆಯ ಸಂಸ್ಥಾಪಕ ಜಿ.ಕೆ.ಮಹಾಂತೇಶ್ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದರು. 3 ಲಕ್ಷ ನಗದು ಹಾಗೂ ಪದಕವನ್ನು ಈ ಪ್ರಶಸ್ತಿ ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com