
ಜಕಾರ್ತ: ಇಂಡೋನೇಶಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.3 ರಷ್ಟು ತೀವ್ರತೆ ದಾಖಲಾಗಿದೆ.
ಇಂಡೋನೇಶಿಯಾ ಕಡಲಲ್ಲಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದಾಗಿ ಬೃಹತ್ ಗಾತ್ರದ ಅಲೆಗಳು ಕಡಲ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದ್ದು, ಸುನಾಮಿ ಎದುರಾಗುವ ಭೀತಿ ಶುರುವಾಗಿದೆ. ಆದರೆ ಸದ್ಯ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ.
ಅಮೆರಿಕದ ಭೂಗೋಳ ತಂತ್ರಜ್ಞರ ಮಾಹಿತಿ ಪ್ರಕಾರ, ಕರ್ನೇಟ್ ನಗರದ ಕಡಲ ತೀರದಿಂದ 154 ಕಿ.ಮಿ ದೂರದ ಸಮುದ್ರದಲ್ಲಿ 47 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ. ಕಂಪನದ ತೀವ್ರತೆ ದೊಡ್ಡದಿರುವುದರಿಂದ ಸುನಾಮಿ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ತಜ್ಞರ ಅಭಿಪ್ರಾಯ.
ಫೆಸಿಪಿಕ್ ಕಡಲ ತೀರದ ಜನರಿಗೆ ಮುನ್ಸೂಚನೆ ನೀಡಲಾಗಿದ್ದು, ಹಲವರನ್ನ ಸ್ಥಳಾಂತರಿಸಲಾಗಿದೆ. ಸುನಾಮಿಯ ಹೊಡೆತ ತೈವಾನ್, ಜಪಾನಿನ ಒಕಿನೋವಾ ಸಿಟಿ, ಅಮೆರಿಕದ ಗುಯಾಮ್, ಪಪಾಯ್ ಸೋಲೋಮನ್ ಐಲ್ಯಾಂಡ್, ಮಾರ್ಷಲ್ ಐಲ್ಯಾಂಡ್‘ಗೆ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Advertisement