ವಿಶ್ವ ಭಯೋತ್ಪಾದನೆ ನಿಗ್ರಹಕ್ಕೆ ತಂತ್ರಗಾರಿಕೆ ಅಗತ್ಯ: ಮೋದಿ

ವಿಶ್ವ ಭಯೋತ್ಪಾದನೆ ಹತ್ತಿಕ್ಕಲು ದೇಶಗಳ ಜಂಟಿ ತಂತ್ರಗಾರಿಕೆ ಅಗತ್ಯವಾಗಿದೆ...
ವಿಶ್ವ ಭಯೋತ್ಪಾದನೆ ನಿಗ್ರಹಕ್ಕೆ ತಂತ್ರಗಾರಿಕೆ ಅಗತ್ಯ: ಮೋದಿ

ಬ್ರಿಸ್ಬೇನ್: ವಿಶ್ವ ಭಯೋತ್ಪಾದನೆ ಹತ್ತಿಕ್ಕಲು ದೇಶಗಳ ಜಂಟಿ ತಂತ್ರಗಾರಿಕೆ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಪ್ರಸಕ್ತ ಸಾಲಿನ ಜಿ-20 ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಅವರು, ವಿಶ್ವ ಮಟ್ಟದಲ್ಲಿ ಬೆಳೆದಿರುವ ಭಯೋತ್ಪಾದನೆ ಹತ್ತಿಕ್ಕಬೇಕಾದರೆ, ಎಲ್ಲಾ ದೇಶಗಳು ಒಟ್ಟಾಗಿ ವ್ಯೂಹ ರಚಿಸಬೇಕು. ಆಗ ಮಾತ್ರ ಭಯೋತ್ಪಾದನೆಯನ್ನು ಬುಡದಿಂದ ಕಿತ್ತೊಗೆಯಲು ಸಾಧ್ಯ ಎಂದು ಮೋದಿ ತಿಳಿಸಿದ್ದಾರೆ.

ದೇಶಗಳ ನಡುವಿನ ಸಹಕಾರ ಸಂಬಂಧ ಸುಧಾರಣೆ ಮುಖ್ಯವಾಗಿದೆ. ಆದರೆ ಈ ಸುಧಾರಣೆ ಜನತೆಯಿಂದಲೇ ಆಗಬೇಕಿದೆ ಎಂದ ಅವರು, ತಂತ್ರಜ್ಞಾನ ಮತ್ತು ಆಡಳಿತ ಕಾರ್ಯವಿಧಾನ ಸುಧಾರಣೆಯಾಗಬೇಕಿದೆ ಎಂದು ಹೇಳಿದ್ದಾರೆ.  

ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬ್ಬೋಟ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com