ಮೋಸ್ಟ್ ವಾಂಟೆಡ್ ಭಯೋತ್ಪಾದಕಿ 'ಬಿಳಿ ವಿಧವೆ' ಸತ್ತಿಲ್ಲ, ಬದುಕಿದ್ದಾಳೆ: ವರದಿ

ಸಮಂತಾ ಲ್ಯೂತ್ ವೈಟ್
ಸಮಂತಾ ಲ್ಯೂತ್ ವೈಟ್

ಲುಹಾನ್ಸಕ್: ವಿಶ್ವದ ಮೋಸ್ಟ್ ವಾಂಟೆಡ್ ಬ್ರಿಟನ್ ಮೂಲದ ಭಯೋತ್ಪಾದಕಿ 'ಬಿಳಿ ವಿಧವೆ' ಸಮಂತಾ ಲ್ಯೂತ್ ವೈಟ್ ಸತ್ತಿಲ್ಲ, ಬದುಕಿದ್ದಾಳೆ ಎನ್ನುತ್ತಿದೆ ವರದಿಗಳು.

ಸಮಂತಾ ಲ್ಯೂತ್‌ಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ನಿನ್ನೆ ಸುದ್ದಿ ವಾಹಿನಿಗಳಲ್ಲಿ ಭಿತ್ತರಗೊಂಡಿದ್ದವು. ಆದರೆ ಇಂದು ಸಮಂತಾ ಸತ್ತಿಲ್ಲ, ಬದುಕಿದ್ದಾಳೆ. ತನ್ನ ಪತಿ ಅಲ್ ಖೈದಾ ಸಂಘಟನೆಯ ಭಯೋತ್ಪಾದಕನೊಂದಿಗೆ ಸೋಮಾಲಿಯಾದಲ್ಲಿ ವಾಸವಾಗಿದ್ದಾಳೆ ಎಂಬ ವರದಿ ಕೀನ್ಯಾದ ಮೂಲಗಳಿಂದ ತಿಳಿದುಬಂದಿದ್ದು, ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಯುದ್ಧಪೀಡಿತ ಭೂಮಿ ಉಕ್ರೇನ್‌ನಲ್ಲಿ ಬಿಳಿ ವಿಧವೆ ಎಂದೇ ಕರೆಯಲಾಗುತ್ತಿದ್ದ ಸಮಂತಾ ಲ್ಯೂತ್ ವೈಟ್‌ಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಹೇಳಲಾಗಿತ್ತು.

ಕಳೆದ ಎರಡು ವಾರಗಳ ಹಿಂದೆ ಯುದ್ಧಪೀಡಿತ ಭೂಮಿ ಉಕ್ರೇನ್‌ಗೆ ಬಿಳಿ ವಿಧವೆ ಪ್ರವೇಶಿಸಿ, ಸರ್ಕಾರದ ಪರ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಈಕೆಯನ್ನು ಸೈನಿಕನೊಬ್ಬ ಗುಂಡಿಟ್ಟು ಕೊಂದಿದ್ದಾನೆ. ಈಕೆಯನ್ನು ಕೊಂದಿದ್ದಕ್ಕೆ ಸೈನಿಕನಿಗೆ 630,000 ಡಾಲರ್ ಬಹುಮಾನ ಘೋಷಿಸಿದೆ ಎಂದು ತಿಳಿದು ಬಂದಿತ್ತು.

ಈ ಬಿಳಿ ವಿಧವೆ ಕೀನ್ಯಾ ಹಾಗೂ ಸೋಮಾಲಿಯಾಗಳಲ್ಲಿ ಕಾರ್ಯಚರಣೆ ನಡೆಸುವ ವೇಳೆ ಪ್ರಮುಖವಾಗಿ ಕಾಣಿಸಿಕೊಂಡಿದ್ದಳು.ಕಳೆದ ವರ್ಷ ನೈರೋಬಿಯ ಮಾಲ್ ಮೇಲಿನ ದಾಳಿ ನಡೆಸಿ 67 ಜನರನ್ನು ಬಲಿ ತೆಗೆದುಕೊಳ್ಳಲಾಯಿತು. ಈ ದಾಳಿಯ ಪ್ರಮುಖ ರುವಾರಿಯಾದ ಈಕೆಯನ್ನು ವಿಶ್ವದ ಮೋಸ್ಟ್ ವಾಟೆಂಡ್ ಭಯೋತ್ಪಾದಕ ಎಂದು ಘೋಷಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com