ಬಾಬಾ ರಾಂಪಾಲ್‌ಗೆ ಅಜ್ಞಾತ ಸ್ಥಳದಲ್ಲಿ ಚಿಕಿತ್ಸೆ

ರಾಂಪಾಲ್ ಆಶ್ರಮದ ಮುಂದೆ ಭಕ್ತರು ದಂಡು
ರಾಂಪಾಲ್ ಆಶ್ರಮದ ಮುಂದೆ ಭಕ್ತರು ದಂಡು

ಬಾರ್ವಾಲಾ: ವಿವಾದಾತ್ಮಕ ದೇವಮಾನವ ರಾಂಪಾಲ್ ತಮ್ಮ ಆಶ್ರಮದಿಂದ ತಲೆಮರೆಸಿಕೊಂಡಿದ್ದು, ಅಜ್ಞಾತ ಸ್ಥಳವೊಂದರಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಾಂಪಾಲ್‌ನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅಜ್ಞಾತ ಸ್ಥಳಕ್ಕೆ ಒಯ್ದಿರುವುದಾಗಿ ಆಶ್ರಮದ ವಕ್ತಾರ ತಿಳಿಸಿದ್ದಾರೆ. ಆದರೆ ಆಸ್ಪತ್ರೆ ಹೆಸರು ಬಾಯಿಬಿಡಲು ಅವರು ನಿರಾಕರಿಸಿದರು. ಆಡಳಿತ ಆಶ್ರಮಕ್ಕೆ ಎಲ್ಲಾ ಔಷಧಿ ಮತ್ತಿತರ ಪೂರೈಕೆಗಳನ್ನು ನಿಲ್ಲಿಸಿದ್ದರಿಂದ ನಮಗೆ ಬೇರೆ ದಾರಿ ಇರಲಿಲ್ಲ ಎಂದು ಹೇಳಿದರು.

ಬಾಬಾ ರಾಂಪಾಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಸ್ವಯಂಘೋಷಿತ ದೇವಮಾನವ ರಾಂಪಾಲ್ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಹೊಸದಾಗಿ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಪಾಲ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಮಾಡಿರುವ ಹೈಕೋರ್ಟ್, ಶುಕ್ರವಾರದೊಳಗಾಗಿ ರಾಂಪಾಲ್‌ನನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಹರಿಯಾಣ ಸರ್ಕಾರ ಮತ್ತು ಪೊಲೀಸರಿಗೆ ಸೂಚನೆ ನೀಡಿದೆ.

ರಾಂಪಾಲ್ ವಿರುದ್ಧ ಕಳೆದ ವಾರವಷ್ಟೇ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಅದರಂತೆ ಇಂದು ಕೋರ್ಟ್ ಮುಂದೆ ರಾಂಪಾಲ್‌ನನ್ನು ಹಾಜರುಪಡಿಸಲು ಕೊನೆಯ ದಿನವಾಗಿತ್ತು. ಆದರೆ ಆಶ್ರಮದ ಮುಂದೆ ಕಳೆದ ಒಂದು ವಾರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ಬಂಧನಕ್ಕೆ ವಿರೋಧ ತೋರಿದ್ದಾರೆ.

ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿರುವುದರಿಂದ ರಾಂಪಾಲ್‌ನನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಹರಿಯಾಣ ಸರ್ಕಾರ ಇನ್ನು ಒಂದು ಕಾಲಾವಕಾಶ ನೀಡುವಂತೆ ಕಾಲಾವಕಾಶ ನೀಡಿತ್ತು. ಸದ್ಯದ ಪರಿಸ್ಥಿತಿಯನ್ನು ಅರಿತಿರುವ ಹೈಕೋರ್ಟ್ ಇನ್ನು ಮೂರು ದಿನಗಳ ಕಾಲಾವಕಾಶ ನೀಡಿದ್ದು. ನಾಳಿನ ಶುಕ್ರವಾರದಂದು ರಾಂಪಾಲ್‌ನನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com