7ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

7ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ...
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2014
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2014

ಬೆಂಗಳೂರು: 7ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2014ರ ಡಿಸೆಂಬರ್ 4ರಿಂದ 11ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಅಂಬೇಡ್ಕರ್ ಭವನದಲ್ಲಿ ಡಿ.4 ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರೋತ್ಸವಕ್ಕೆ ಚಾಲನೆ ನೀಡುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರದರ್ಶನಕ್ಕೆ ಒಟ್ಟು 400 ಚಿತ್ರಗಳಲ್ಲಿ 170ನ್ನು ಆಯ್ಕೆ ಮಾಡಲಾಗಿದೆ. ಒಟ್ಟು 17 ಪರದೆಗಳ ಮೇಲೆ ಹಲವು ಭಾಷೆಯ 107 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅವುಗಳಲ್ಲಿ 11 ಭಾರತೀಯ ಹಾಗೂ 11 ಕನ್ನಡ ಚಿತ್ರಗಳಿವೆ. ಬರ್ಲಿನ್, ಕಾನ್, ಕಾರ್ಲೋವಿವಾರಿ, ಮಾಸ್ಕೋ, ವೆನಿಸ್, ಟೊರೊಂಟೊ ಸೇರಿದಂತೆ ಮಹತ್ವದ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಪಡೆದಿರುವ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯ, ಭಾರತೀಯ ಮತ್ತು ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ಸ್ಪರ್ಧಾ ವಿಭಾಗ ಮಾಡಲಾಗಿದೆ.

ಪ್ರತಿಬಾರಿ ಒಂದು ಪ್ರಶಸ್ತಿ ನೀಡಲಾಗುತ್ತಿತ್ತು. ಈ ಬಾರಿ ಭಾರತ ಸಿನಿಮಾ ಸ್ಪರ್ಧೆಯಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲಾಗುವುದು. ಎರಡು ಕನ್ನಡ ಚಿತ್ರಗಳಿಗೆ ಭಾರತೀಯ ಮತ್ತು ಏಷ್ಯನ್ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಚಿತ್ರಗಳಿಗೆ ವಿಶೇಷ ಅಂತಾರಾಷ್ಟ್ರೀಯ ಜ್ಯೂರಿ ಕಲ್ಪಿಸಲಾಗಿದೆ ಎಂದು ಹೇಳಿದರು.

ಝೂಂಗ್ ಯಿಮೋ, ಜಿನ್ ಲಕ್ ಗೊಡಾರ್ಡ್, ಕೆನ್ ಲೋಕ್, ಫಿಲಿಪ್ ನೊಯ್ಸೆ ಸೇರಿದಂತೆ ಖ್ಯಾತ ನಿರ್ದೇಶಕರ ಚಿತ್ರಗಳು ಪ್ರದರ್ಶನವಾಗಲಿವೆ. ಜಪಾನ್, ಇರಾನ್, ಕೊರಿಯಾ, ಪಿಲಿಪಿನ್ಸ್, ಬಾಂಗ್ಲಾ, ಶ್ರೀಲಂಕಾ, ಪಾಕಿಸ್ತಾನ ಮುಂತಾದ ರಾಷ್ಟ್ರಗಳ ಹಾಗೂ ದಕ್ಷಿಣ ಅಮೆರಿಕದ ವಿಶೇಷ ವಿಭಾಗದ ಸಮಕಾಲಿನ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಚಿತ್ರ ಪ್ರದರ್ಶನ ನಡೆಯಲಿವೆ. ಈ ಕಾರ್ಯಕ್ರಮಕ್ಕೆ 15 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಮತ್ತು 50ಕ್ಕೂ ಹೆಚ್ಚು ದೇಶೀಯ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಒಟ್ಟಾರೆ ಸುಮಾರು 5 ಸಾವಿರ ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದರು.

ಇತ್ತೀಚೆಗೆ ನಿಧನರಾದ ಸಾಹಿತಿ ಯು.ಆರ್. ಅನಂತಮೂರ್ತಿ, ಸಿ.ಆರ್.ಸಿಂಹ, ಬಾಲು ಮಹೇಂದ್ರ, ಕೆ.ಎಂ.ಶಂಕರಪ್ಪ, ಅಲನ್ರೆನೆ, ವಿ.ಕೆ.ಮೂರ್ತಿ ಅವರ ನೆನಪಿನಾರ್ಥ ಹಾಗೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಿನ್ನೆಲೆಯಲ್ಲಿ ಅವರ ನೆನಪಿನ ಕಥೆಗಳನ್ನಾಧರಿಸಿ ತಯಾರಿಸಿದ ವಿಶೇಷ ಚಿತ್ರಗಳನ್ನು  ಪ್ರದರ್ಶಿಸಲಾಗುವುದು.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿರುವ ಲೈಂಗಿಕ ದೌರ್ಜನ್ಯ ಕುರಿತು ವಿಶೇಷವಾಗಿ ಆರು ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಮಕಾಲಿನ ವಸ್ತುವಾದ ಲೈಂಗಿಕ ಹಿಂಸೆಯ ಬಗ್ಗೆ ವಿಶೇಷ ಚಿತ್ರಗಳ ಪ್ರದರ್ಶನ ಮತ್ತು ಚರ್ಚೆ ನಡೆಯಲಿದೆ.

ಲೈಂಗಿಕ ಹಿಂಸೆ ಕುರಿತು ನಡೆಯುವ 1 ದಿನದ ವಿಚಾರ ಸಂಕಿರಣದಲ್ಲಿ ನಟಿ ಸುಹಾಸಿನಿ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಶಾಲಿನಿ ರಜನೀಶ್ ತಿಳಿಸಿದರು.

44 ದೇಶ, 17 ಪರದೆ

  • ವಿಶ್ವ ಸಿನಿಮಾ-62
  • ಏಷ್ಯನ್ ಸಿನಿಮಾ ಸ್ಪರ್ಧೆ-9
  • ಕನ್ನಡ-ಭಾರತೀಯ ವಿಶೇಷ ಪ್ರದರ್ಶನಗಳು-9
  • ವಿಶೇಷ ವಿಭಾಗ-11
  • ಸಿನಿಮಾ ವಿಶೇಷ ವಿಭಾಗ-ಫ್ರೆಂಚ್ ಕ್ಲಾಸಿಕ್-6
  • ಡಾ.ಯು.ಆರ್.ಅನಂತಮೂರ್ತಿ ಶ್ರದ್ಧಾಂಜಲಿ ವಿಶೇಷ-13
  • ಲೈಂಗಿಕ ಹಿಂಸೆ ಚಿತ್ರಗಳ ವಿಶೇಷ-6
  • ವಿಮರ್ಶಕರ ಆಯ್ಕೆ -5
  • ಏಷ್ಯನ್ ಸ್ಪರ್ಧಾ ವಿಜೇತ-6
  • ದಾದಾ ಸಾಹೇಬ್ ದಿ.ವಿ.ಕೆ.ಮೂರ್ತಿ ಶ್ರದ್ಧಾಂಜಲಿ-5
  • ನೆನಪಿನ ಮಾಲೆ: ಸಿ.ಆರ್.ಸಿಂಹ, ಕೆ.ಎಂ.ಶಂಕರಪ್ಪ, ಬಾಲು ಮಹೇಂದ್ರ, ಅಲನ್ರೆನೆ-4
  • ಶತಮಾನ ನೆನಪು ಹೊನ್ನಪ್ಪ ಭಾಗವತ್-1
  • ಹುಣಸೂರು ಕೃಷ್ಣಮೂತಿ-1
  • ಸಾರ್ವಜನಿಕರ ಪ್ರದರ್ಶನ ಹಾಸ್ಯ ಚಿತ್ರಗಳು-6

ವಿಚಾರ ಸಂಕಿರಣ
  • ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ದಿ.ವಿ.ಕೆ.ಮೂರ್ತಿ ಅವರ ನೆನಪಿನಲ್ಲಿ ಛಾಯಾಗ್ರಹಣ ಸಂಬಂಧ ಚಲನಚಿತ್ರ ಕುರಿತು 2 ದಿನ ಕಾರ್ಯಾಗಾರದಲ್ಲಿ ಗೋವಿಂದ್ ನಿಹಲಾನಿ, ಜಿ.ಎಸ್. ಭಾಸ್ಕರ್ ಇತರರು ಬಾಗವಹಿಸಲಿದ್ದಾರೆ.
  • ಚಿತ್ರಗಳಲ್ಲಿ ಸಂಗೀತ ಕುರಿತಂತೆ ನಡೆಯುವ 1 ದಿನದ ಕಾರ್ಯಾಗಾರದಲ್ಲಿ ಫ್ರೆಂಚ್ನ ಸಂಗೀತಗಾರ ಫೈಕಲ್ ಸಾಲ್ಹಿ ಇತರರು ಚರ್ಚಿಸಲಿದ್ದಾರೆ.
  • ವಲಸೆ ಮತ್ತು ಐಡೆಂಟಿಟಿ ಕುರಿತು 1 ದಿನದ ವಿಚಾರ ಸಂಕಿರಣದಲ್ಲಿ ಜರ್ಮನಿ, ಶ್ರೀಲಂಕಾದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
  • ಕರ್ನಾಟಕದ ಹಳೆಯ ಚಿತ್ರಮಂದಿರಗಳ ಛಾಯಾಚಿತ್ರ ಕುರಿತು ಮ್ಯಾಕ್ಸ್ ಮುಲ್ಲರ್ ಭವನದಲ್ಲಿ ಚರ್ಚೆ
  • ಜರ್ಮನ್ ತಂಡದಿಂದ ಹಳೆ ಮೂಕಿ ಆ್ಯನಿಮೇಷನ್ ಚಿತ್ರ ಪ್ರದರ್ಶನ, ಚರ್ಚೆ

ನೋಂದಣಿ ಸ್ಥಳ

ಎಲ್ಲಿ ಪ್ರದರ್ಶನ, ಎಷ್ಟು ಪರದೆ
  • ಫನ್ ಸಿನಿಮಾ, ಸಿಗ್ಮಾಮಾಲ್-ಕನ್ನಿಂಗ್ ಹ್ಯಾಂ ರಸ್ತೆ- 3 ಪರದೆ
  • ಲಿಡೋ ಐನಾಕ್ಸ್-ಹಲಸೂರು- 4 ಪರದೆ
  • ಸುಲೋಚನಾ-ವಾರ್ತಾ ಇಲಾಖೆ- 1 ಪರದೆ
  • ಪ್ರಿಯದರ್ಶಿನಿ- ಬಾದಾಮಿ ಹೌಸ್- 1 ಪರದೆ
  • ಚಾಮುಂಡೇಶ್ವರಿ ಸ್ಟುಡಿಯೋ- ಕನ್ನಿಂಗ್ ಹ್ಯಾಂ ರಸ್ತೆ- 1 ಪರದೆ
  • ಸ್ವಾತಂತ್ರ್ಯ ಉದ್ಯಾನವನ- 1 ಪರದೆ (ಸಂಜೆ ಸಾರ್ವಜನಿಕ ಪ್ರದರ್ಶನ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com