ಕತ್ತೆಯಿಂದ ಕಚ್ಚಿಸಿಕೊಂಡ ಮಗುವಿಗೆ ಹೊಸ ದವಡೆ ಜೋಡಣೆ

ಕತ್ತೆಯಿಂದ ಕಚ್ಚಿಸಿಕೊಂಡು ಮುಖ ವಿರೂಪಗೊಂಡಿದ್ದ...
ಶಸ್ತ್ರಚಿಕಿತ್ಸೆಗೂ ಮುನ್ನ ಇದ್ದ  ಕೊಮಾನ್ಯಿ ಮಗು
ಶಸ್ತ್ರಚಿಕಿತ್ಸೆಗೂ ಮುನ್ನ ಇದ್ದ ಕೊಮಾನ್ಯಿ ಮಗು

ಚೆನ್ನೈ: ಕತ್ತೆಯಿಂದ ಕಚ್ಚಿಸಿಕೊಂಡು ಮುಖ ವಿರೂಪಗೊಂಡಿದ್ದ ಆಫ್ರಿಕಾ ಮೂಲದ 2 ವರ್ಷದ ಮಗುವಿಗೆ ದವಡೆ ಶಸ್ತ್ರಚಿಕಿತ್ಸೆಯನ್ನು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

ಕೊಮಾನ್ಯಿ ಆಫ್ರಿಕಾ ಮೂಲದ ದಂಪತಿಗಳ ಮಗುವಾಗಿದ್ದು, ಈ ಮಗುವಿಗೆ 1 ವರ್ಷದ ಹಿಂದೆ ಟಾಂಜೇನಿಯಾ ಒಂದು ಹಳ್ಳಿಯಲ್ಲಿ ಆಟವಾಡುತ್ತಿದ್ದಾಗ ಕತ್ತೆಯೊಂದು ಮಗುವಿನ ಬಾಯಿಗೆ ಕಚ್ಚಿದೆ. ಕಚ್ಚಿದ ಪರಿಣಾಮ ಮಗುವಿನ ಕೆಳ ತುಟಿ ಹಾಗೂ ಹಲ್ಲುಗಳು ಹಾಳಾಗಿತ್ತು. ನಂತರ ಕತ್ತೆಯ ಮುಖದಂತೆ ಹೋಲುವ ಹಾಗೆಯೇ ಮಗುವಿನ ಮುಖದ ಚಹರೆ ಬೆಳವಣಿಗೆಯಾಗತೊಡಗಿದೆ.

2 ವರ್ಷವಾಗುತ್ತಿದ್ದಂತೆ ಕೊಮಾನ್ಯಿ ಮಗು ಆಹಾರ ಸೇವಿಸಲು ಕಷ್ಟವಾಗಿ ನಿರಾಕರಿಸುತ್ತಿತ್ತು. ಈ ವೇಳೆ ಮಗುವಿನ ತಾಯಿ ಮಗುವಿನ ತಲೆಯನ್ನು ಹಿಂದಕ್ಕೆ ಎಳೆದು ಗಂಟಲಿಗೆ ನೇರವಾಗಿ ಆಹಾರವನ್ನು ಹಾಕಿ ತಿನ್ನುಸುತ್ತಿದ್ದಳು. ಮಗುವಿನ ಸಮಸ್ಯೆ ಉಲ್ಭಣಗೊಳ್ಳುವುದನ್ನು ಕಂಡ ಪೋಷಕರು ಆತಂಕಗೊಂಡು ಊರೂರು ಸುತ್ತಿದ್ದಾರೆ. ಮಗುವಿನ ಪೋಷಕರು ಆಫ್ರಿಕಾ ಮೂಲದವರಾದ್ದರಿಂದ ಅವರಿಗೆ ಭಾಷೆಯ ಸಮಸ್ಯೆ ಎದುರಾಗಿದೆ. ಭಾಷೆ ಅರ್ಥವಾಗದ ವೈದ್ಯರು ಕಾರಣ ತಿಳಿಯದೇ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಟಾಂಜೇನಿಯಾದ ತಜ್ಞರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

ನಂತರ ಮಗುವಿನ ಪೋಷಕರು ಚೆನ್ನೈನ ಅಪೋಲೋ ಆಸ್ಪತ್ರೆಗೆ ಬಂದಾಗ ವಿಷಯ ಟಾಂಜೇನಿಯಾದ ಆರೋಗ್ಯ ಸಂಸ್ಥೆಗೆ ತಿಳಿದಿದೆ. ಪ್ರಕರಣ ಗಮನಿಸಿದ ಟಾಂಜೇನಿಯಾ ಆರೋಗ್ಯ ಸಂಸ್ಥೆ  ಮಗುವಿನ ಚಿಕಿತ್ಸೆಗೆ ತಗುಲುವ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುವುದಾಗಿ ಹೇಳಿತ್ತು. ಪ್ರಸ್ತುತ ಮಗುವಿಗೆ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಹೊಸ ದವಡೆ ಜೋಡಣೆ ಮಾಡಲಾಗಿದೆ.

ಕತ್ತೆಯೊಂದು ಮಗುವಿನ ಕೆಳ ಬಾಯಿಯ ಹಂತವನ್ನು ಸಂಪೂರ್ಣ ಕಚ್ಚಿರುವ ಪರಿಣಾಮ ಮಗುವಿಗೆ ಈ ಸಮಸ್ಯೆ ಎದುರಾಗಿದೆ. ಮಗುವಿಗೆ 3 ರೀತಿಯ ಶಸ್ತ್ರಕ್ರಿಯೆ ಮಾಡಬೇಕಿದೆ. ಶಸ್ತ್ರಕ್ರಿಯೆಯಾದ 60 ದಿನಗಳ ನಂತರ ಸಾಮಾನ್ಯರಂತೆ ಯಾವುದೇ ಆಹಾರ ಬೇಕಾದರೂ ಸೇವಿಸಬಹುದು. ಚಿಕಿತ್ಸೆ ನಂತರ ಮಗುವಿನ ಬೆಳವಣಿಗೆ ಸಾಮಾನ್ಯವಾಗಿರುತ್ತದೆ ಎಂದು ಅಪೋಲೋ ಆಸ್ಪೆತ್ರೆಯ ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com